ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ, ಧಾರ್ಮಿಕ ಸಭೆ

0

ನಮ್ಮ ದೇಶ ಮೂಢನಂಬಿಕೆ ಕೇಂದ್ರವಲ್ಲ, ದೇವಸ್ಥಾನಗಳಿರುವ ಮೂಲ ನಂಬಿಕೆಯ ಕೇಂದ್ರಗಳು: ಮನೋಹರ್ ಮಠದ್

ದೇವಸ್ಥಾನಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸೇವಾ ಕೇಂದ್ರವಾಗಳಾಗಬೇಕು. ಅದಾಗಿಯೇ ಇರಬೇಕು, ದೇವಸ್ಥಾನ ಪೂಜೆಗೆ ಮಾತ್ರ ಸೀಮಿತವಾಗಿರದೆ ನಮ್ಮ ದೇಶ ಮೂಢನಂಬಿಕೆ ಕೇಂದ್ರವಲ್ಲ, ಮೂಲ ನಂಬಿಕೆಯ ಕೇಂದ್ರಗಳು ಎಂದು ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕರಾದ ಮನೋಹರ್ ಮಠದ್ ಹೇಳಿದರು. ಅವರು ಕಿರು ಷಷ್ಠಿ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ದರ್ಮದರ್ಶಿಗಳ ಚಿಂತನಾ ಸಭೆ “ಗುಡಿ- ಜನರ ಜೀವನಾಡಿ” ಧಾರ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತಿದ್ದರು.

ದೇವಸ್ಥಾನ ನ್ಯಾಯಸ್ಥಾನದಲ್ಲಿ ನ್ಯಾಯ ನೀಡುವ ಸ್ಥಳಗಳಾಗಿವೆ, ನ್ಯಾಯಾಧೀಶರು ನೀಡುವ ತೀರ್ಪಿಗಿಂತ ಉತ್ತಮ ತೀರ್ಪು ದೇವಸ್ಥಾನದಿಂದ ಸಿಗಬಹುದು. ಆದ್ದರಿಂದ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಯಾರೂ ಮೋಸ ಮಾಡಬೇಡಿ. ಮೋಸ ಮಾಡಿದರೆ ಅದರಿಂದ ಯಾರಿಗೂ ಒಳ್ಳೆಯದಾಗಲು ಸಾದ್ಯವಿಲ್ಲ ಎಂದವರು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಲವಾರು ಮಕ್ಕಳಿಗೆ ಅನ್ನದಾನ ಮಾಡುತ್ತದೆ, ಶಿಕ್ಷಣ ನೀಡುತ್ತದೆ. ಮಾಸ್ಟರ್ ಪ್ಲಾನ್ ಮುಖಾಂತರ ಕಾಮಗಾರಿ ಮಾಡಿ ಅಭಿವೃದ್ಧಿ ಮಾಡುತ್ತದೆ. ನೂರಾರು ಗಿಡ ನೆಟ್ಟು ಬೆಳೆಸುತ್ತಿದೆ ಇದು ದೇವಸ್ಥಾನಗಳು ಮಾಡಬೇಕಾದ ಕೆಲಸ ಅದು ಇಲ್ಲಿ ನಡೆಯುತ್ತಿದೆ ಎಂದರು.

ಕರ್ನಾಟಕದಲ್ಲಿ ಒಟ್ಟು 34,563 ಸರ್ಕಾರ ವ್ಯವಸ್ಥೆ ಗೊಳಪಟ್ಟ ದೇವಸ್ಥಾನಗಳಿವೆ. ಇದಲ್ಲದೆ ಇತರೇ ದೇವಸ್ಥಾನಗಳು ಸೇರಿ ಒಟ್ಟಾಗಿ 2,84,563 ದೇವಸ್ಥಾನಗಳಿವೆ ಎಂದು ಮಾಹಿತಿ ನೀಡಿದರು.

ಸಭೆಯ
ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ‌ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಿದ್ದರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮನೋಹರ ರೈ, ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸಾ ಬೆಂಗಳೂರು, ಲೊಕೇಶ್ ಮುಂಡೊಕಜೆ, ಶೋಬಾ ಗಿರಿಧರ್, ವನಜಾ ಭಟ್, ಕಾರ್ಯನಿರ್ವಾಹಣಾಧಿಕಾರಿ ಡಾl ನಿಂಗಯ್ಯ ವೇದಿಕೆ ಯಲ್ಲಿ ಇದ್ದರು. ಪಿ.ಜಿ.ಎಸ್.ಎನ್ ಪ್ರಸಾದ್ ಸ್ವಾಗತಿಸಿ, ಪ್ರಸನ್ನ ದರ್ಬೆ ವಂದಿಸಿದರು. ವಿನ್ಯಾಸ್ ಹೊಸೋಳಿಕೆ, ಕೃತಿಕಾ ಪಿ.ಎಸ್, ಅಶ್ವಿನಿ ಎಸ್.ಎನ್, ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.