ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಮತ್ತು ವಾರ್ಷಿಕೋತ್ಸವ

0

ಕೆವಿಜಿ ದಂತ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ ಮತ್ತು ವಾರ್ಷಿಕೋತ್ಸವ ಜ. 15ರಂದು ಅಮರಶ್ರೀಭಾಗ್ ನ ಜಾನಕಿ‌ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಎ.ಒ.ಎಲ್.ಇ. ಬಿ ಕಮಿಟಿಯ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಡಾ. ರೇಣುಕಾಪ್ರಸಾದ್ ಕೆ.ವಿ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ನೀಡುವಂತೆ ಶುಭ ಹಾರೈಸಿದರು. ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ದಿಕ್ಸೂಚಿ ಭಾಷಣ ಮಾಡಿದರು.


ಎಒಎಲ್ಇ ಬಿ ಕಮಿಟಿಯ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್, ಕೆವಿಜಿ ದಂತ‌ ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಎನ್.ಎ. ರಾಮಚಂದ್ರ ಹಾಗೂ ಜಾಕೆ ಮಾಧವ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು. ಕೆವಿಜಿ ದಂತ ಮಹಾ ವಿದ್ಯಾಲಯದ ಆಡಳಿತಾಧಿಕಾರಿ ಮಾಧವ ಬಿ.ಟಿ, ವಿಭಾಗ ಮುಖ್ಯಸ್ಥರಾದ ಡಾ. ಮನೋಜ್ ಅಡ್ಡಂತ್ತಡ್ಕ, ಡಾ. ಎಂ.ಎಂ. ದಯಾಕರ್, ಡಾ. ಸವಿತಾ ಸತ್ಯಪ್ರಸಾದ್, ಡಾ. ಜಯಪ್ರಸಾದ್ ಆನೆಕಾರ, ಡಾ. ನಸ್ರತ್ ಫರೀದ್, ಡಾ. ಪ್ರಸನ್ನ ಕುಮಾರ್, ಡಾ. ಸುಹಾಸ್ ರಾವ್, ಡಾ. ಶೈಲಾ ಎಂ, ಡಾ. ಶರತ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆವಿಜಿ ದಂತ‌ ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಮೋಕ್ಷಾ ನಾಯಕ್ ವಾರ್ಷಿಕ ವರದಿ ವಾಚಿಸಿದರು. ಡಾ.ಕೃಷ್ಣಪ್ರಸಾದ್ ಸ್ವಾಗತಿಸಿದರು. ಡಾ.ರೇವಂತ್ ವಂದಿಸಿದರು. ಡಾ. ಫಾತಿಮಾ ಶಿದಾ ಮತ್ತು ಡಾ. ಮನಿಷಾ ರೈ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಭೋಜನ ನಡೆಯಿತು.

ಗ್ರಾಮೀಣ ಪ್ರದೇಶವಾದ ಸುಳ್ಯವನ್ನು ಶಿಕ್ಷಣ ಕಾಶಿಯಾಗಿ ಬದಲಾಯಿಸಿ, ಪ್ರಪಂಚದಲ್ಲಿ ಸುಳ್ಯವನ್ನು ಗುರುತಿಸುವಂತೆ ಮಾಡಿದವರು ಡಾ. ಕುರುಂಜಿಯವರು. ಒಂದೇ ಶಿಕ್ಷಣ ಕೇಂದ್ರದಲ್ಲಿ ಎಲ್ಲಾ ವಿಭಾಗಗಳ ಶಿಕ್ಷಣ ದೊರೆಯುವಂತೆ ಮಾಡಿದ ಕುರುಂಜಿಯವರ ಸಾಧನೆ ಅಮೂಲ್ಯವಾದದ್ದು. ಪದವಿ ಪೂರೈಸಿದ ವಿದ್ಯಾರ್ಥಿಗಳು ಮುಂದೆ ಅತ್ಯುತ್ತಮ ರೀತಿಯ ಸೇವೆ ಮಾಡುವ ಮೂಲಕ ಸಂಸ್ಥೆಗೂ, ಹೆತ್ತವರಿಗೂ ಗೌರವ ತಂದು ಕೊಡಿ. ಆಗ ನಿಮ್ಮಲ್ಲಿರುವ ಜ್ಞಾನಕ್ಕೆ ಮೌಲ್ಯ ಬರುತ್ತದೆ – ಡಾ. ಕೊಳಂಬೆ ಚಿದಾನಂದ ಗೌಡ