ಅಭಿವೃದ್ಧಿ ಪಥದಲ್ಲಿ ಮಂಡೆಕೋಲು ಸಹಕಾರಿ ಸಂಘ

0

೮ ದಶಕಗಳ ಹಿಂದೆ ಆರಂಭಗೊಂಡ ಮಂಡೆಕೋಲು ಸಹಕಾರಿ ಸಂಘ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಗ್ರಾಹಕರಿಗೆ ಎಲ್ಲ ರೀತಿಯ ಅಗತ್ಯ ಸೇವೆಗಳನ್ನು ನೀಡುವುದರ ಜತೆಗೆ, ಪೇರಾಲಿನಲ್ಲಿ ನವೀಕೃತ ಶಾಖೆಯನ್ನು ತೆರೆಯುವುದರೊಂದಿಗೆ ಮಂಡೆಕೋಲಿನಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಅಲ್ಲಿಯೂ ನೀಡುವತ್ತ ಮುಂದಡಿ ಇಟ್ಟಿದೆ.
ಆರಂಭ

1940ರಲ್ಲಿ ಮಾವಂಜಿ ವಿವಿಧೋzಶ ಸಹಕಾರಿ ಸಂಸ್ಥೆ ಎಂಬ ಹೆಸರಿನಲ್ಲಿ ಮಂಡೆಕೋಲಿನಲ್ಲಿ ಸಹಕಾರ ಸಂಘ ಆರಂಭಗೊಂಡಿತು. ಆ ಬಳಿಕ 1960ರಲ್ಲಿ ನಿಯಮಗಳು ಬದಲಾಗಿ ಆಯಾಯ ಗ್ರಾಮದ ಹೆಸರೇ ಇಡಬೇಂದು ಸುತ್ತೋಲೆ ಬಂದುದರಿಂದ ಮಂಡೆಕೋಲು ಸೇವಾ ಸಹಕಾರಿ ಸಂಘ ಎಂದು ಹೆಸರು ಇಡಲಾಯಿತು. ಹಂತ ಹಂತವಾಗಿ ಬೆಳೆದುಕೊಂಡು ಬಂದ ಸಹಕಾರಿ ಸಂಸ್ಥೆ ಇಂದು ತಾಲೂಕಿನಲ್ಲಿ ಅತ್ಯುತ್ತಮ ಸಹಕಾರಿ ಸಂಘವಾಗಿ ಹೊರ ಹೊಮ್ಮಿದೆ. ಅಲ್ಲದೆ ಗ್ರಾಹಕರಿಗೆ ಉತಮ ಸೇವೆಯನ್ನು ನೀಡುತ್ತಿದೆ.


1940ರಲ್ಲಿ ಸಂಘ ಸ್ಥಾಪನೆಯಾದ ಸಂದರ್ಭ ರಾಮಣ್ಣ ಹೆಬ್ಬಾರ್ ಅಧ್ಯಕ್ಷರಾದರು. ಆ ಬಳಿಕ ಚೋಯಪ್ಪ ಮಣಿಯಾಣಿ, ಕೆ.ಕೂಸಪ್ಪ ಗೌಡ, ಎಂ.ಕೃಷ್ಣಪ್ಪ ಗೌಡ, ವಿ.ಪಿ.ಶಂಕರ ನಾರಾಯಣ ರಾವ್, ಯು.ಎಂ. ರಾಮಣ್ಣ ಗೌಡ, ಲಿಂಗಪ್ಪ ಗೌಡ ಬಿ, ದಾಮೋದರ ಮಾಸ್ತರ್, ಆ.ಶ.ಸತ್ಯನಾರಾಯಣ, ಎಂ.ಎನ್. ಕೃಷ್ಣಪ್ಪ ಗೌಡ, ದೇವಪ್ಪ ಗೌಡ ಪಾತಿಕಲ್ಲು, ಮಾವಾಜಿ ಮುದ್ದಪ್ಪ ಗೌಡ, ಕರುಣಾಕರ ಗೌಡ ಪಾತಿಕಲ್ಲು, ಡಿ.ವಿ.ಸದಾನಂದ ಗೌಡ, ಹೆಚ್. ರಾಮಕಡಂಬಳಿತ್ತಾಯ, ಪಿ.ಪಾಂಡುರಂಗ ರಾವ್, ಹಾಗೂ ಶಿವಪ್ರಸಾದ್ ಉಗ್ರಾಣಿಮನೆ, ಪ್ರಸ್ತುತ ರಾಮಕೃಷ್ಣ ಪೇರಾಲುಗುತ್ತು ಅಧ್ಯಕ್ಷರಾಗಿದ್ದಾರೆ.
ಪಾಂಡುರಂಗ ರಾವ್‌ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಂಡೆಕೋಲು ಸಹಕಾರ ಸಂಘದ ಸುಸಜ್ಜಿ ತ ಕಟ್ಟಡದೊಂದಿಗೆ, ಪೇರಾಲು ಶಾಖೆಯ ಶಾಖಾ ಕಟ್ಟಡ ಆರಂಭ ಮಾಡಲಾಯಿತು. ಶಿವಪ್ರಸಾದ್ ಉಗ್ರಾಣಿಮನೆಯವರು ಅಧ್ಯಕ್ಷರಾಗಿದ್ದ ಸಂದರ್ಭ ಸಹಕಾರಿ ಸಂಘದ ಕಟ್ಟಡ ನವೀಕರಣ, ಸಭಾಭವನ ಇತ್ಯಾದಿ ಅಭಿವೃದ್ಧಿ ಕಾರ್ಯಗಳೊಂದಿಗೆ ಅಮೃತ ಮಹೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಪ್ರಸ್ತುತ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಕೃಷ್ಣ ರೈ ಪೇರಾಲುಗುತ್ತು, ಉಪಾಧ್ಯಕ್ಷರಾಗಿ ಜಲಜಾ ದೇವರಗುಂಡ, ನಿರ್ದೇಶಕರಾಗಿ ಈಶ್ವರಚಂದ್ರ ಕೆ.ಆರ್. ಭಾಸ್ಕರ ಮಿತ್ತ ಪೇರಾಲು, ಪದ್ಮನಾಭ ಚೌಟಾಜೆ, ಸುರೇಶ್ ಕಣೆಮರಡ್ಕ, ಚಂದ್ರಜಿತ್ ಮಾವಂಜಿ, ಸುನಿಲ್ ಪಾತಿಕಲ್ಲು, ಮೋನಪ್ಪ ನಾಯ್ಕ ಬೇಂಗತ್ತಮಲೆ, ಭಾರತಿ ಉಗ್ರಾಣಿಮನೆ, ಸರಸ್ವತಿ ಕಣೆಮರಡ್ಕ, ರವಿ ಚೇರದಮೂಲೆ, ಹಾಗೂ ಜಿಲ್ಲಾ ಬ್ಯಾಂಕಿನ ಪ್ರತಿನಿಧಿಯಾಗಿ ಬಾಲಕೃಷ್ಣ ಪುತ್ಯ ಇದ್ದಾರೆ. ಈಗಿನ ಆಡಳಿತದ ಅವಧಿಯಲ್ಲಿ ಮರಣ ಸಾಂತ್ವನ ನಿಧಿ ಸ್ಥಾಪಿಸಿ ಮರಣ ಹೊಂದಿದ ಪ್ರತಿ ಸದಸ್ಯರ ಮನೆಯವರಿಗೆ ರೂ. ೫ ಸಾವಿರ ಸಹಾಯ ನೀಡಲಾಗುತ್ತಿದೆ. ಕೃಷಿ ಉಪಕರಣ ಮಾರಾಟ ಎಲ್ಲ ರೀತಿಯ ರಸಗೊಬ್ಬರ ವ್ಯವಸ್ಥೆಯನ್ನು, ಹಾಗೂ ಮುಂದಿನ ದಿನದಲ್ಲಿ ಆರ್‌ಟಿಜಿಎಸ್ ನೆಫ್ಟ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಸಂಘವು ೬ ಬಾರಿ ಶೇ.೧೦೦ ವಸೂಲಾತಿ ಪ್ರಗತಿ ಸಾಧಿಸಿರುವುದಲ್ಲದೆ, ಸತತ ೭ ವರ್ಷಗಳಿಂದ ಉತ್ತಮ ಸಹಕಾರ ಸಂಘ ಎಂಬ ಪ್ರೋತ್ಸಾಹಕ ಪ್ರಶಸ್ತಿ ಡಿಸಿಸಿ ಬ್ಯಾಂಕ್ ನಿಂದ ಪಡೆಯುತ್ತಿದೆ. ಪ್ರಕೃತ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಉದಯಕುಮಾರ್ ಹಾಗೂ ೭ ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಂಬ್ರೋಟಿ ಪೇರಾಲು ಶಾಖೆಯ ಗೋದಾಮು ಕಟ್ಟಡ ಮಲ್ಟಿ ಸರ್ವಿಸ್ ಸೆಂಟರ್ ಹಾಗೂ ನವೀಕೃತ ಶಾಖೆಯ ಉದ್ಘಾಟನಾ ಸಮಾರಂಭ ಇಂದು ನಡೆಯುವುದು. ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ನವೀಕೃತ ಶಾಖೆಯ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ನೆರವೇರಿಸುವರು. ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಗೋದಾಮು ಕಟ್ಟಡ ಉದ್ಘಾಟಿಸುವರು. ಮಂಡೆಕೋಲು ಗ್ರಾ.ಪಂ. ಅಧ್ಯಕ್ಷ ಕುಶಲ ಉದ್ದಂತಡ್ಕ, ಸುಳ್ಯ ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ನಾಯಕ್, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ತ್ರಿವೇಣಿ ರಾವ್, ಮಂಡೆಕೋಲು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪಾಂಡುರಂಗ ರಾವ್ ಪುತ್ಯ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ಶ್ರೀಪಾದ ಕನ್ಸಲ್ಟೆನ್ಸಿಯ ತಾಂತ್ರಿಕ ಸಲಹೆಗಾರ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಭಾಗವಹಿಸಲಿದ್ದಾರೆ.