ಪಾಲಾಕ್ಷ ಸುಳ್ಯ ಅತ್ಲೇಟಿಕ್ಸ್ ಕ್ರೀಡಾ ಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಜನವರಿ 13,14 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣ ದಲ್ಲಿ ನಡೆದ ರಾಜ್ಯ ಮಟ್ಟದ ಕರ್ನಾಟಕ ಮಾಸ್ಟರ್ ಅತ್ಲೇಟಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಶ್ರೀ ಬಿ. ಎ. ಪಾಲಾಕ್ಷ ಸುಳ್ಯ ಇವರು 100 ಮೀಟರ್ ಓಟ ಪ್ರಥಮ, ಲಾಂಗ್ ಜಂಪ್ ಪ್ರಥಮ ಮತ್ತು ಹ್ಯಾಮಾರ್ ಥ್ರೋ ನಲ್ಲಿ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

ಇವರು ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ.