ಉದ್ಯಮಾಸಕ್ತರಿಗೆ ಉದ್ಯಮಶೀಲತೆ, ಅಭಿವೃದ್ಧಿ ಕುರಿತ ಮಾಹಿತಿ ಕಾರ್ಯಾಗಾರ

0

ಉದ್ಯೋಕಾಂಕ್ಷಿಗಳಿಗೆ ಮತ್ತು ಸ್ವಂತ ಉದ್ಯಮ ಮಾಡುವವರಿಗಾಗಿ ಉದ್ಯಮಶೀಲತೆ, ಅಭಿವೃದ್ಧಿ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ ಶ್ರೀಹರಿ ಕಾಂಪ್ಲೆಕ್ಸ್‌ನಲ್ಲಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ಜ. 15 ರಂದು ನಡೆಯಿತು.

ಸುಳ್ಯ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ, ಪ್ರದಾನ ವರದಿಗಾರ ಹರೀಶ್ ಬಂಟ್ವಾಳ್, ಮಹಿರಿಹಿ ವಿಭಾಗ ಮುಖ್ಯಸ್ಥ ಕೃಷ್ಣ ಬೆಟ್ಟ, ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಗ್ಲೋಬಲ್ ಇನ್‌ಸ್ಟಿಟ್ಯೂಟ್ ಫಾರ್ ಎಜುಕೇಶನ್ ಆಂಡ್ ರೀಸರ್ಚ್ ಫೌಂಡೇಶನ್‌ನ ಆಶಿಷ್‌ರವರು ಉಪಸ್ಥಿತರಿದ್ದರು.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆ ದ.ಕ.ಜಿಲ್ಲೆಯ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಮಾಹಿತಿ ನೀಡಿ, ದೇಶದ ದೊಡ್ಡ ಉದ್ದಿಮೆದಾರರಾದ ಅಂಬಾನಿ, ಟಾಟಾ, ಅಜಿಂ ಪ್ರೇಮ್‌ಜಿರವರಂತೆ ನಾವು ಕೂಡ ಉದ್ಯಮದ ಕನಸು ಕಾಣಬೇಕು. ಇದಕ್ಕೆ ಒಳ್ಳೆಯ ಮನಸ್ಸು ಕೂಡ ನಾವು ಹೊಂದಿರಬೇಕು ಎಂದರು. ನಮ್ಮ ದೇಶದಲ್ಲಿ ನೈಸರ್ಗಿಕ ಹಾಗೂ ಇತರ ಸಂಪನ್ಮೂಲಗಳು ಅಗಾಧವಾಗಿದೆ. ನಮ್ಮ ದೇಶದಲ್ಲಿರುವ ಸಂಪನ್ಮೂಲಗಳು ಬೇರೆ ಯಾವ ದೇಶದಲ್ಲಿಯೂ ಇಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿಯೂ ನಮ್ಮಲ್ಲಿ ಹಲವಾರು ಪದವಿಗಳಿವೆ. ಭಾರತ ದೇಶದಲ್ಲಿ ಹುಟ್ಟಿದ ಅನೇಕರು ವಿದೇಶದಲ್ಲಿ ದೊಡ್ಡ ಉದ್ದಿಮೆದಾರರು, ಉದ್ಯೋಗಿಗಳು ಆಗಿದ್ದಾರೆ. ನಮಗೆ ವಿದೇಶಿ ವ್ಯಾಮೋಹ ಜಾಸ್ತಿಯಾಗಿದೆ. ವಿದೇಶಿ ಉತ್ಪನ್ನಗಳ ಬಳಕೆ ಬೇಡ. ಸ್ವದೇಶೀ ಉತ್ಪನ್ನಗಳನ್ನು ತಯಾರಿಸಿ ಇದರಿಂದ ನಾವೇ ಶ್ರೀಮಂತರಾಗೋಣ. ಯಶಸ್ವಿ ಉದ್ಯಮಿಗಳು ಕಷ್ಟವನ್ನು ಎದುರಿಸಿ ಬಂದವರೇ ಆಗಿದ್ದಾರೆ. ನಾವೆಲ್ಲರೂ ಉದ್ಯಮಶೀಲತಾ ಗುಣಗಳನ್ನು ಬೆಳೆಸಿಕೊಳ್ಳೋಣ ಎಂದರು.

ಗ್ಲೋಬಲ್ ಇನ್‌ಸ್ಟಿಟ್ಯೂಟ್ ಫಾರ್ ಎಜುಕೇಶನ್ ಆಂಡ್ ರೀಸರ್ಚ್ ಫೌಂಡೇಶನ್‌ನ ಆಶಿಷ್‌ರವರು ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಇಲಾಖೆಗಳ ಸಚಿವಾಲಯ(IಖIಉ)ದ ಅಡಿಯಲ್ಲಿ ನಡೆಯುತ್ತಿರುವ ಘಉಈ ಪ್ರಮಾಣಪತ್ರದ ಮಾಹಿತಿ ನೀಡಿದರು.

ಉದ್ಯಮಶೀಲತಾ ತರಬೇತಿ ಪಡೆದು ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ನಿತ್ಯ ಚಪಾತಿಯ ರಾಧಾಕೃಷ್ಣ ಮತ್ತು ಉಷಾ ದಂಪತಿಯವರು ಅನಿಸಿಕೆ ತಿಳಿಸಿದರು.

ಕಾರ್ಯಾಗಾರದಲ್ಲಿ ಚಂದ್ರಶೇಖರ ದಾಮ್ಲೆ, ಕೆ.ಪೃಥ್ವಿರಾಜ್, ರಮಿತಾ ಜಯರಾಂ, ಜಗದೀಶ್ ಬೆಳ್ಳಾರೆ, ಸತೀಶ್ ಕಳಂಜ, ಪ್ರಶಾಂತ್ ಮೊಂಟಡ್ಕ ಜಾಲ್ಸೂರು, ಕಾಂತಿ ಸಂಪಾಜೆ, ಅಬ್ರಹಾಂ, ಗಣೇಶ್ ಕಜೆಗದ್ದೆ, ಶಶಿಕಲಾ ಪೇರಾಲು, ಪ್ರದೀಪ್ ನಡುಗಲ್ಲು, ಲೋಚನ ಆಲೆಟ್ಟಿ, ಗಣ್ಯಶ್ರೀ ಪೆರುವಾಜೆ, ಪಲ್ಲವಿ ಎಂಟರ್ ಪ್ರೈಸಸ್ ನ ಲತೀಶ್ ಕುಮಾರ್, ರವಿಕುಮಾರ್ ಅರಂತೋಡು, ಆಯಿಷಾ ಜಯನಗರ, ಮನೋಜ್ ಬುಡ್ಲೆಗುತ್ತು, ರಝಿಯ ಮತ್ತು ಸುದ್ದಿ ಸಿಬ್ಬಂದಿಗಳು ಭಾಗವಹಿಸಿದರು. ವರದಿಗಾರ ಹಸೈನಾರ್ ಜಯನಗರ, ಅರಿವು ಕೃಷಿ ಕೇಂದ್ರದ ರಮ್ಯ ಸತೀಶ್ ಕಳಂಜ, ಗ್ರೀಷ್ಮ ಸುಳ್ಯ ಸಹಕರಿಸಿದರು.