ಮಂಡೆಕೋಲು ಸಹಕಾರಿ ಸಂಘದ ಅಂಬ್ರೋಟಿ ಪೇರಾಲು ಶಾಖೆ ಉದ್ಘಾಟನೆ

0

“ಗ್ರಾಮದ ಅಭಿವೃದ್ಧಿಗೆ ಸಹಕಾರ ಸಂಘ ಪೂರಕವಾಗಿ ಕೆಲಸ ಮಾಡುತ್ತಿದೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಮಂಡೆಕೋಲು‌ ಸಹಕಾರ ಸಂಘದ ಅಂಬ್ರೋಟಿ – ಪೇರಾಲು ಶಾಖೆಯ ಗೋದಾಮು ಕಟ್ಟಡ ಮಲ್ಟಿ ಸರ್ವಿಸ್ ಸೆಂಟರ್ ಹಾಗೂ ನವೀಕೃತ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಗೋದಾಮು ಕಟ್ಟಡವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಉದ್ಘಾಟಿಸಿದರು. “ಸಹಕಾರ ಸಂಘ ಬೆಳೆಸಲು ರೈತರು ಶಕ್ತಿಯಾಗಬೇಕು” ಎಂದು ಅವರು ಹೇಳಿದರು.

ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸುಳ್ಯ ಇದರ ಅಧ್ಯಕ್ಷ ಪ್ರಭಾಕರ ನಾಯಕ್, ಮಂಡೆಕೋಲು ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಾಂಡುರಂಗ ರಾವ್ ಪುತ್ಯ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ಶ್ರೀಪಾದ ಕನ್ಸಲ್ಟನ್ಸಿ ತಾಂತ್ರಿಕ ಸಲಹೆಗಾರ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಆಗಮಿಸಿದ್ದರು.

ಉಪಾಧ್ಯಕ್ಷೆ ಶ್ರೀಮತಿ ಜಲಜಾ ದೇವರಗುಂಡ, ನಿರ್ದೇಶಕರುಗಳಾದ ಈಶ್ವರಚಂದ್ರ ಕೆ.ಆರ್., ಚಂದ್ರಜಿತ್ ಮಾವಜಿ, ಶ್ರೀಮತಿ ಭಾರತಿ ಉಗ್ರಾಣಿಮನೆ, ಮೋನಪ್ಪ ನಾಯ್ಕ ಬೇಂಗತ್ತಮಲೆ, ಭಾಸ್ಕರ ಮಿತ್ತಪೇರಾಲು, ಶ್ರೀಮತಿ ಸರಸ್ವತಿ ಕಣೆಮರಡ್ಕ, ರವಿ ಚೇರದಮೂಲೆ, ಸುನಿಲ್ ಪಾತಿಕಲ್ಲು, ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ವೇದಿಕೆಯಲ್ಲಿ ಇದ್ದರು.

ಸಂಧ್ಯಾ ಮಂಡೆಕೋಲು ಪ್ರಾರ್ಥಿಸಿದರು. ನಿರ್ದೇಶನ ಪದ್ಮನಾಭ ಚೌಟಾಜೆ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಉದಯಕುಮಾರ್ ನಡೆದು ಬಂದ ದಾರಿಯ ಕುರಿತು ವರದಿ ಮಂಡಿಸಿದರು. ನಿರ್ದೇಶಕ ಸುರೇಶ್ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.