ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಕಾರಣಿಕ ಕ್ಷೇತ್ರ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಇಂದು ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಸದಸ್ಯರುಗಳಾದ ರಾಜೇಶ್ವರಿ ಕುಮಾರಸ್ವಾಮಿ, ಧರ್ಮಪಾಲ ಗೌಡ ಸುಳ್ಳಿ, ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ರೈ ಹೈದಂಗೂರು, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಕುಮಾರಸ್ವಾಮಿ ರೆಂಜಾಳ, ಜಗನ್ಮೋಹನ ರೈ ರೆಂಜಾಳ, ದಾಮೋದರ ಪಾಟಾಳಿ ಮಿತ್ತಡ್ಕ, ಮಹಾಬಲ ಗೌಡ ಕಟ್ಟಕೋಡಿ, ಮೋನಪ್ಪ ಪೂಜಾರಿ ಹೈದಂಗೂರು, ಚಿನ್ನಪ್ಪ ಗೌಡ ಬೇರಿಕೆ, ಮಂಜಪ್ಪ ಗೌಡ, ಮನೋಹರ ರೈ ಹೈದಂಗೂರು, ಶಿವರಂಜನ್ ರಾವ್ ದಾಸರಬೈಲು, ಜನಾರ್ದನ ಗೌಡ ಕೊಡಪಾಲ, ದಿನೇಶ್ ಕೊರತ್ತೋಡಿ, ಅಣ್ಣು ಕಟ್ಟಕೋಡಿ, ರಾಜೇಶ್ ಬೇರಿಕೆ, ಮೋಹನ ರೆಂಜಾಳ, ರೋಹಿತ್ ಕೊಡಪಾಲ, ಜಯರಾಮ ಬೇರಿಕೆ, ಶಶಿಕಾಂತ ಗುಳಿಗಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ 12 ತೆಂಗಿನಕಾಯಿ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.