ಎಸ್ ಎಂ ಎ ವತಿಯಿಂದ ಲೀಡ್ ಎನ್ ಗೈಡ್ ಮೀಟ್

0

ಪೇರೋಡ್ ಉಸ್ತಾದರಿಂದ ಅದ್ಯಯನ ತರಬೇತಿ ಶಿಬಿರ

ಮೊಹಲ್ಲಾ ಸಬಲೀಕರಣ ಮತ್ತು ಶೈಕ್ಷಣಿಕ ಕ್ಷೇತ್ರದ ಶ್ರೇಯಾಭಿವೃದ್ದಿಗಾಗಿ ಕಾರ್ಯಾಚರಿಸುತ್ತಿರುವ ಸುನ್ನೀ ಮಾನೇಜ್ ಮೆಂಟ್ ಅಸೋಸಿಯೇಶನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ಇದರ ವತಿಯಿಂದ ಜಮಾಅತ್ ಮತ್ತು ಸಂಘ ಸಂಸ್ಥೆಗಳ ಸದಸ್ಯರುಗಳನ್ನು ಒಗ್ಗೂಡಿಸಿ ಜ. 23 ರಂದು ಸುಳ್ಯಅನ್ಸಾರಿಯಾ ಎಜ್ಯುಕೇಶನ್ ಸೆಂಟರ್‌ ನಲ್ಲಿ ಲೀಡ್ ಎನ್ ಗೈಡ್ ಮೀಟ್ ಮಹಲ್ಲ್ ಆಡಳಿತ ಮತ್ತು ನಿಯಂತ್ರಣ ಎಂಬ ವಿಷಯದ ಬಗ್ಗೆ ಅಧ್ಯಯನ ತರಬೇತಿ ಶಿಬಿರ ನಡೆಯಿತು.


ಖ್ಯಾತ ವಾಗ್ಮಿ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದ್ ರವರು ತರಬೇತಿ ಶಿಬಿರದಲ್ಲಿ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ದ.ಕ ಜಿಲ್ಲಾದ್ಯಕ್ಷರಾದ ಸಯ್ಯದ್ ಸಾದಾತ್ ತಂಙಳ್ ಕರವೇಲು ಪ್ರಾರ್ಥನೆ ನೇತೃತ್ವ ವಹಿಸಿದರು.ಎಸ್ ಎಂ ಎ ರೀಜ್ಯನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಸುಳ್ಯ ತಾಲೂಕು ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ‌ಸಯ್ಯದ್ ಕುಂಞಿಕೋಯ ತಂಙಳ್ ಶುಭ
ಹಾರೈಸಿದರು.


ಗಾಂಧಿನಗರ ಖತೀಬ್ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಉದ್ಘಾಟಿಸಿದರು.
ಎಸ್ ಎಂ ಎ ಬೆಳ್ಳಾರೆ ಝೊನಲ್ ಅಧ್ಯಕ್ಷ ಇಬ್ರಾಹಿಂ ಬೀಡು,ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಹ್ಸನಿ,ಜಿಲ್ಲಾ ಸಮಿತಿ ಉಪಾಧ್ಯಕ್ಷ ಲತೀಫ್ ಹರ್ಲಡ್ಕ,ಎಸ್ ಜೆ ಎಂ ರಾಜ್ಯ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ಸಖಾಫಿ ಪುಂಡೂರು,ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ,ಅನ್ಸಾರಿಯಾ ಖತೀಬ್ ಉಮ್ಮರ್ ಮುಸ್ಲಿಯಾರ್, ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ವಿವಿಧ ಜಮಾಅತ್ ಅಧ್ಯಕ್ಷರುಗಳು,ಖತೀಬರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಮಾಅತ್,ಮದ್ರಸ ಮತ್ತು ಸಂಘ ಸಂಸ್ಥೆಗಳ ಮಾದರೀ ಆಡಳಿತ,ಉತ್ತಮ ನಾಯಕತ್ವ ಗುಣ,ವೆಕ್ತಿತ್ವ ವಿಕಸನ ಮುಂತಾದ ಪ್ರಮುಖ ವಿಷಯಗಳ ಮುಂದಿರಿಸಿ ಆಯೋಜಿಸಲ್ಪಟ್ಟ ಪ್ರಸ್ತುತ ಲೀಡ್ ಎನ್ ಗೈಡ್ ಮೀಟ್ ನಲ್ಲಿ ಮಸೀದಿ,ಮದ್ರಸ ಆಡಳಿತ ಮಂಡಳಿ,ಅಸೋಸಿಯೇಶನ್ ಹಾಗೂ ಎಲ್ಲಾ ಸುನ್ನೀ ಸಂಘ ಸಂಸ್ಥೆಗಳ ಸದಸ್ಯರುಗಳು ಪ್ರತಿನಿಧಿಗಳಾಗಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು, ಎಸ್ ಎಂ ಎ ಸುಳ್ಯ ರೀಜ್ಯನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್‌ ಹಮೀದ್ ಸುಣ್ಣಮೂಲೆ ಕಾರ್ಯಕ್ರಮ ನಿರೂಪಿಸಿದರು.