ಹರಿಹರ ಪಲ್ಲತ್ತಡ್ಕ: ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವು ತಾ.24 ರಂದು ನಡೆಯಿತು.
ಬೆಳಿಗ್ಗೆ ಗಣಹೋಮ ನಂತರ ಶಿವಪೂಜೆ, ಬ್ರಹ್ಮ ರಾಕ್ಷಸ ಹಾಗು ಕಲಶ ಪೂಜೆ ನಡೆದು ಮಹಾಪೂಜೆ ನಡೆಯಿತು.
ಸಂಜೆ ದೀಪಾರದನೆ ಮಹಾ ತಂಬಿಲ ಹಾಗೂ ಗುಳಿಗರಾಜ ದೈವದ ನೇಮೋತ್ಸವ ನಡೆಯಿತು.
ರಾತ್ರಿ ಶ್ರೀ ಶಾರದಾಂಬ ಯಕ್ಷಗಾನ ಅದ್ಯಯನ ಕೇಂದ್ರ ಕಲಾಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ ಜ್ಯೋತಿ ಸ್ವರೂಪ ಯಕ್ಷಗಾನ ನಡೆಯಿತು.
ಸಾರ್ವಜನಿಕರಿಗೆ ಮಧ್ಯಾಹ್ನ ಹಾಗು ರಾತ್ರಿ ಅನ್ನಸಂತರ್ಪಣೆ ನೆರವೇರಿತು