ಎಲಿಮಲೆ ಜ್ಞಾನದೀಪ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ

0

ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮವು ಶಾಲಾ ವಿದ್ಯಾರ್ಥಿಗಳ ಪಥಸಂಚಲನದೊಂದಿಗೆ ಪ್ರಾರಂಭಿಸಲಾಯಿತು.

ಶಶಿಶೇಖರ ಕಲ್ಲುಕಟ್ಟೆ, ಸೈನಿಕರು,ಭಾರತೀಯ ಭೂಸೇನೆಯವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತಮಂಡಳಿಯ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ಭಟ್ ತಳೂರು,ಸಂಚಾಲಕರಾದ ಎ ವಿ ತೀರ್ಥರಾಮ ಅಂಬೆಕಲ್ಲು, ನಿರ್ದೇಶಕರಾದ ಕೃಷ್ಣಯ್ಯ ಮೂಲೆತೋಟ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಇಂದಿರೇಶ್ ಗುಡ್ಡೆ ಉಪಸ್ಥಿತರಿದ್ದರು.

ಬಳಿಕ ವಿದ್ಯಾರ್ಥಿಗಳಾದ ಕೀರ್ತಿಶ್ರೀ ಹಾಗೂ ಪೂರ್ವಿಯವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶ್ರೀಯುತ ಶಶಿ ಶೇಖರ ಕಲ್ಲುಕಟ್ಟೆಯವರು ಭೂಸೇನೆಯ ಮಹತ್ವದ ಬಗ್ಗೆ ತಿಳಿಸಿದರು.

ಚಂದ್ರಶೇಖರ ತಳೂರು ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಗುರುಗಳಾದ ಶ್ರೀ ಗದಾಧರ ಬಾಳುಗೋಡು, ಮಾತೃ ಭಾರತಿಯ ಸಂಯೋಜಕಿ ಶ್ರೀಮತಿ ವಿದ್ಯಾಸರಸ್ವತಿ, ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶ್ರೀಮತಿ ಭಾರತಿ ಕೇಪಳಕಜೆ, ವಿದ್ಯಾರ್ಥಿ ನಾಯಕ ನೂತನ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಗಧಾದರ ಬಾಳುಗೋಡು ಸ್ವಾಗತಿಸಿ, ಶ್ರೀಮತಿ ಹೇಮಲತಾ ಮಾತಾಜಿಯವರು ಧನ್ಯವಾದಗೈದರು ಮತ್ತು ಶ್ರೀಮತಿ ಗೌತಮಿ ಮಾತಾಜಿ ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.