ಪಂಜ-ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಬೆಳ್ಳಿ ಹಬ್ಬ ಸಂಭ್ರಮ-ಸಮಾರೋಪ

0

ಸಮರ್ಪಣಾ ಮನೋಭಾವದ ಕಲಾರಂಗ : ಹರೀಶ್ ಕಂಜಿಪಿಲಿ

ಇನ್ನಷ್ಟು ಸಾಧನೆಗೆ ಸನ್ಮಾನ ಪ್ರೇರಣೆ : ಮಾಧವ ಗೌಡ ಬೇರ್ಯ

ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗ ಇದರ
ಬೆಳ್ಳಿ ಹಬ್ಬ .’ಬೊಳ್ಳಿ-ಪಜ್ಜೆ – 2024′ ಪ್ರಯುಕ್ತ ಜ.28 ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಸನ್ಮಾನ, ಸಮರ್ಪಣಾ ನಿಧಿ ವಿತರಣೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ “ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಾರಂಭವಾದ ಸಂಸ್ಥೆ ಇವತ್ತು ಬೃಹತಾಕಾರವಾಗಿ ಬೆಳೆದಿದೆ.ಸಮರ್ಪಣಾ ಮನೋಭಾವದ ತಂಡ ಇರುವುದರಿಂದ ಸಂಸ್ಥೆ ಬೆಳ್ಳಿ ಹಬ್ಬವನ್ನು ಆಚರಿಸಿದೆ. ಮುಂದಿನ ದಿನಗಳಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸುವಂತಾಗಲಿ.'” ಎಂದು ಅವರು ಹೇಳಿದರು.

ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಗೌಡ ಬೇರ್ಯ ಸಾಧಕರನ್ನು ಸನ್ಮಾನಿಸಿ ಮಾತನಾಡಿ “ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗವು ನಿರಂತರವಾಗಿ ಸಮಾಜಮುಖಿ ಸೇವೆಗಳನ್ನು ನೀಡುತ್ತಾ ಬಂದಿರುವ ಶಿಸ್ತು ಬದ್ಧ ಸಂಸ್ಥೆ. ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಅತ್ಯಂತ ಉತ್ತಮ ಕಾರ್ಯ. ಸಾಧಕರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದಾಗ ಅವರ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡಿದಂತಾಗುತ್ತದೆ.” ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ಕಲಾ ರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ ನಿವೃತ್ತ ತಾಂತ್ರಿಕ ಅಧಿಕಾರಿ ನೋಂಡಪ್ಪ ನಾಯ್ಕ ಚಾಳೆಗುಳಿ, ಮಾಡಬಾಗಿಲು ಕಂಬಳ ಟ್ರಸ್ಟ್ ಅಧ್ಯಕ್ಷ ಬಿ.ಯಂ. ಆನಂದ ಗೌಡ ಕಂಬಳ ‌ಹಾಗೂ ಕಲಾರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಸತೀಶ್ ಪಲ್ಲೋಡಿ, ಬೆಳ್ಳಿ ಹಬ್ಬದ ಮುಖ್ಯ ಸಂಚಾಲಕ ನಾರಾಯಣ ಗೌಡ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮರ್ಪಣಾ ನಿಧಿ:
ಹಪ್ಸಿತಾ ಕಂರ್ಬು ಮನೆ,ಯಜ್ಞ ಕಂರ್ಬು ಮನೆ, ಅವಿನ್ ಕುಮಾರ್ ಕುಳ್ಳಾಜೆ ರವರಿಗೆ ಸಮರ್ಪಣಾ ನಿಧಿ ವಿತರಿಸಲಾಯಿತು.


ಸಾಧಕರಿಗೆ ಸನ್ಮಾನ :
ಸಮಾಜ ಸೇವೆ ಬಿ ಯಂ ಆನಂದ ಗೌಡ ಕಂಬಳ, ಸಾಂಸ್ಕೃತಿಕ ಪ್ರಶಾಂತ್ ರೈ ಪಲ್ಲೋಡಿ, ವಿದೂಷಿ ಪೃಥ್ವಿ ಶೆಟ್ಟಿ ಪಲ್ಲೋಡಿ, ಕ್ರೀಡೆ ಪ್ರಜ್ವಲ್ ಶೆಟ್ಟಿ ಪಲ್ಲೋಡಿ, ಅವನಿ ಪಳಂಗಾಯ, ಚಿನ್ಮಯಿ ಆಳ್ವ, ಯೋಗ ಅನ್ವಿತ್ ಶೆಟ್ಟಿ ಪಲ್ಲೋಡಿ, ಚಿತ್ರಕಲೆ ಜಸ್ವಿತ್ ತೋಟ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್, ಯುವ ತೇಜಸ್ ಟ್ರಸ್ಟ್ ರವರು ಸನ್ಮಾನ ಸ್ವೀಕರಿಸಿದರು ಹಾಗೂ
ಶ್ರೀಮತಿ ಜೀವಿತ ಯಶವಂತ ಪಲ್ಲೋಡಿ, ಯಶವಂತ ಪಲ್ಲೋಡಿ,ಸತೀಶ್ ಪಲ್ಲೋಡಿ ರವರು ಕಲಾರಂಗಕ್ಕೆ ಸ್ಥಳ ದಾನ ಮಾಡಿದ್ದು ಸತೀಶ್ ಪಲ್ಲೋಡಿಯವರು ಸನ್ಮಾನ ಸ್ವೀಕರಿಸಿದರು.


ಕಲಾರಂಗದ ಕಾರ್ಯಕ್ರಮಗಳಿಗೆ ಸಹಕರಿಸಿದವರಿಗೆ, ಪೂರ್ವಾಧ್ಯಕ್ಷರು, ಕಾರ್ಯದರ್ಶಿಯವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ದೇರಾಜೆ ಸ್ವಾಗತಿಸಿದರು. ಪ್ರಕಾಶ್ ಜಾಕೆ ಪ್ರಾಸ್ತಾವಿಕ ಮಾತನಾಡಿದರು.
ಶ್ರೀಮತಿ ಧನ್ಯತಾ ಬಾಲಕೃಷ್ಣ ಪಲ್ಲೋಡಿ ನಿರೂಪಿಸಿದರು.ಸತೀಶ್ ಪಲ್ಲೋಡಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದೂಷಿ ಪೃಥ್ವಿ ಶೆಟ್ಟಿ ಪಲ್ಲೋಡಿ ರವರಿಂದ ಭಾರತ ನಾಟ್ಯ ವಿಟ್ಲ ಮೈರ ಕೇಪು ಶ್ರೀ ದುರ್ಗಾ ಕಲಾ ತಂಡದ
ಪುಗರ್ತೆ ಕಲಾವಿದೆರ್ ಅಭಿನಯಿಸುವ ಅದ್ದೂರಿ ಭಕ್ತಿ ಪ್ರಧಾನ ತುಳು ನಾಟಕ ‘ಕಲ್ಜಿಗದ ಕಾಳಿ ಮಂತ್ರ ದೇವತೆ’ ಪ್ರದರ್ಶನ ಗೊಂಡಿತು.