ಮಂಡೆಕೋಲು ಕಳೇರಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

0

ಮಂಡೆಕೋಲು ಶ್ರೀ‌ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಉಳ್ಳಾಕುಲು ಮತ್ತು ಧರ್ಮದೈವ ಹಾಗೂ ಸಪರಿವಾರ ದೈವಗಳ ದೈವಸ್ಥಾನ ಕಳೇರಿ ಇಲ್ಲಿ ಉಳ್ಳಾಕುಲು, ಧರ್ಮದೈವ ಹಾಗೂ ಸಪರಿವಾರ ದೈವಗಳ ‌ಎಂಟನೇ ವರ್ಷದ ಪ್ರತಿಷ್ಟಾ ಮಹೋತ್ಸವವು ಜ.31ರಂದು ನಡೆಯಿತು.

ಜ.30ರಂದು ದೇವತಾ ಪ್ರಾರ್ಥನೆ ಬಳಿಕ ಉಗ್ರಾಣ ತುಂಬಿಸಲಾಯಿತು. ಸಂಜೆ ಭಜನೆ ಬಳಿಕ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.

ಜ.31ರಂದು ಬೆಳಗ್ಗೆ ಗಣಪತಿ ಹವನ, ನವಕ ಕಲಶಾಭಿಷೇಕ, ಭಜನೆ, ದೈವಗಳಿಗೆ ತಂಬಿಲ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಕಳೇರಿ ಸಮಿತಿಯವರು, ದೇವಸ್ಥಾನದ ಸಮಿತಿಯವರು ಇದ್ದರು. ನೂರಾರು‌ ಭಕ್ತರು ಆಗಮಿಸಿ ಪ್ರಸಾದ ಸ್ವೀಕಾರ‌ ಮಾಡಿದರು.