ರಂಗಮನೆಯಲ್ಲಿ ರಂಗ ಸಂಭ್ರಮ 2024 ಶುಭಾರಂಭ

0

ರಂಗಮನೆಯಲ್ಲಿ ಎಳವೆಯಿಂದಲೇ ರಂಗಶಿಕ್ಷಣ : ರಾಜೇಶ್ ಜಿ.

ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ರಂಗಸಂಭ್ರಮ 2024 ಇಂದು ಶುಭಾರಂಭಗೊಂಡಿತು.

” ರಂಗಮನೆಯಲ್ಲಿ ವಿಶೇಷವಾದ ದೃಶ್ಯ ಕಂಡುಬರುತ್ತದೆ. ಅದೆಂದರೆ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಇಲ್ಲಿಯ ಕಾರ್ಯಕ್ರಮಗಳಿಗೆ ಕರೆತರುತ್ತಿರುವುದು. ಇದರಿಂದಾಗಿ ಇಲ್ಲಿ ಮಕ್ಕಳಿಗೆ ರಂಗಶಿಕ್ಷಣ ದೊರೆಯುತ್ತದೆ. ನೀವು ಏನೇ ಶಿಕ್ಷಣ ಪಡೆದು ಯಾವುದೇ ಉದ್ಯೋಗ ಮಾಡಿಕೊಂಡಿರಿ. ಜತೆಗೆ ನೀವು ಕಲಾಸಕ್ತರಾಗಿದ್ದರೆ ನೀವು ಜನರ ವಿಶೇಷ ಗೌರವಕ್ಕೆ ಪಾತ್ರರಾಗುತ್ತೀರಿ” ಎಂದು ದ.ಕ.ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಹೇಳಿದರು.
ಅವರು ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ಇಂದು ಆರಂಭವಾದ ರಂಗಸಂಭ್ರಮ 2024 ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಮುಖ್ಯ ಅತಿಥಿಯಾಗಿದ್ದರು. ರಂಗಮನೆಯ ರೂವಾರಿ ಜೀವನ್ ರಾಂ ಸುಳ್ಯ ಅಧ್ಯಕ್ಷತೆ ವಹಿಸಿದ್ದರು.
ಕೃಷ್ಣಮೂರ್ತಿ ಕಳಂಜ ಸ್ವಾಗತಿಸಿ,  ರವೀಶ್ ಪಡ್ಡಂಬೈಲು ವಂದಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ವಿನೋದಿನಿ ಎನ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.