ಪೇರಾಲು ಅಂಬ್ರೋಟಿ ಶ್ರೀ ರಾಮ ಮಂದಿರದಲ್ಲಿ ಏಕಾಹ ಭಜನೆ

0

ಪೇರಾಲು ಅಂಬ್ರೋಟಿ
ಶ್ರೀ ರಾಮ ಭಜನಾ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ಏಕಾಹ ಭಜನೆ ಯು ಫೆ.4 ರಂದು ನಡೆಯಿತು.
ಸೂರ್ಯೋದಯಕ್ಕೆ ದೀಪ ಸ್ಥಾಪನೆಯಾಗಿ ಭಜನಾ ‌ಕಾರ್ಯಕ್ರಮ ಆರಂಭಗೊಂಡಿತು. ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನಿರಂತರ
24 ಗಂಟೆಗಳ ಕಾಲ ಭಜನೆಯು ನಡೆಯಿತು.


ರಾತ್ರಿ ಮಹಾಪೂಜೆಯಾಗಿ ಪ್ರಸಾದವಿತರಣೆಯಾಯಿತು. ಮರುದಿನ ಪ್ರಾತ:ಕಾಲ ಸೂರ್ಯೋದಯದ ವೇಳೆಗೆ ಭಜನೆ ಮಹಾ ಮಂಗಳಾರತಿಯಾಗಿ ಸಮಾಪನಗೊಂಡಿತು.