ಪಂಜದ ನಿಕ್ಷಿತಾ ಕರಿಮಜಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ

0

ಬೆಂಗಳೂರು ನಗರ ಜಿಲ್ಲಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವೈಯುಕ್ತಿಕ ಏರೋಸ್ಕ್ವಾಯ್ ಮತ್ತು ಕವನ್ ಕಿ
ಸಮೂಹ ವಿಭಾಗದಲ್ಲಿ ಪಂಜದ ಕರಿಮಜಲು ನಿಕ್ಷಿತಾ ರವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ
ಪದಕ ಪಡೆದಿದ್ದಾರೆ.

ಫೆ. 3 ಮತ್ತು 4 ರಂದು ತ್ರಿಭವನ ವಿಶ್ವವಿದ್ಯಾನಿಲಯ ಕಠ್ಮಂಡು ನೇಪಾಳ ತ್ರಿಭವನ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ವೈಯುಕ್ತಿಕ ಏರೋ ಸ್ಕ್ವಾಯ್ ಮತ್ತು ಕವನ್ ಕಿ ಸಮೂಹ ವಿಭಾಗ ದಲ್ಲಿ ಮೊದಲನೇ ಮತ್ತು ದ್ವಿತೀಯ ಸ್ಥಾನವನ್ನು ಪಡೆದು ಭಾರತಕ್ಕೆ ಚಿನ್ನದ ಪದಕ ಮತ್ತು ಬೆಳ್ಳಿ ಪದಕವನ್ನು ತಂದು ಕೊಟ್ಟಿರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಇವರು ಪಂಜದ ಕರಿಮಜಲು ಶೇಷಪ್ಪ ಮತ್ತು ಲೀಲಾವತಿ ಯವರ ಪುತ್ರಿ. ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಕನಕಪುರ ರೋಡ್ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರಿಗೆ ದಿವ್ಯಾ ಬಾಯಿ ಪಿ . ಎನ್ ತರಬೇತಿ ನೀಡಿರುತ್ತಾರೆ.