ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸುವ ಬಗ್ಗೆ ಸೂಚನೆ

0

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಬ್ಯಾನರ್ ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ.


ಆದರೂ ಪದೇ ಪದೇ ಅನುಮತಿ ಪಡೆಯದೆ ಬ್ಯಾನರ್ ಅಳವಡಿಸಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಬ್ಯಾನರ್ ಅಳವಡಿಸುವವರು ಕಡ್ಡಾಯವಾಗಿ ಪಂಚಾಯತ್ ನಿಂದ ಅನುಮತಿ ಪಡೆಯುವುದು.
ಹಾಗೂ ಅನುಮತಿ ಪಡೆಯದೆ ಅಳವಡಿಸಿರುವ ಬ್ಯಾನರನ್ನು ಮತ್ತು ಬ್ಯಾನರ್ ಅಳವಡಿಸಿ ಕಾರ್ಯಕ್ರಮ ಮುಗಿದ ನಂತರ ಕೆಲವು ಬ್ಯಾನರ್ ಗಳನ್ನು ತೆರವುಗೊಳಿಸಿರುವುದಿಲ್ಲ. ಆದ್ದರಿಂದ ಗ್ರಾಮ ಪಂಚಾಯತ್ ನಿಂದ ಎಲ್ಲಾ ಅನಧಿಕೃತ ಬ್ಯಾನರನ್ನು ತೆರವುಗೊಳಿಸಿ ಅಳವಡಿಸಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ತಿಳಿಸಿದೆ.


ಹಾಗು ಬ್ಯಾನರ್ ಅಳವಡಿಸುವ ಸಂಸ್ಥೆಯವರು ಬ್ಯಾನರ್ ಅಳವಡಿಸಲು ಅನುಮತಿ ಪಡೆದುಕೊಂಡ ಕುರಿತು ಖಚಿತಪಡಿಸಿಕೊಂಡು ಗ್ರಾಮ ಪಂಚಾಯತ್ ವ್ಯಾಪ್ತಿ ಯೊಳಗೆ ಬ್ಯಾನರ್ ಅಳವಡಿಸಬೇಕಾಗಿ ಈ ಮೂಲಕ ಸೂಚಿಸಿದೆ.