ಕುಕ್ಕುಜಡ್ಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ

0

ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಜ.26 ಗಣರಾಜ್ಯೋತ್ಸವದಂದು ನಡೆಯಿತು.
ಪ್ರತಿಭಾ ಪುರಸ್ಕಾರದ ಸಂದರ್ಭದಲ್ಲಿ ಶಾಲೆಗೆ ಕೊಳವೆ ಬಾವಿಗೆ ಪಂಪು ನೀಡಿ ಸಹಕರಿಸಿದ ಮಾಜಿ ಸಚಿವ ಎಸ್ ಅಂಗಾರ , ಶಾಲೆಗೆ ಸಿ.ಸಿ.ಟಿ.ವಿ ನೀಡಿದ ನಂದಕುಮಾರ್ ಉದ್ಯಮಿ ಮಡಿಕೇರಿ , ಕೊಳವೆ ಬಾವಿಯ ಪಂಪುಗೆ ವಿದ್ಯುತ್ ಅಳವಡಿಸಲು ಧನಸಹಾಯ ನೀಡಿ ಸಹಕರಿಸಿದ ಪರಮೇಶ್ವರ ಪಡ್ಪು, ಗೋಪಾಲಕೃಷ್ಣ ಬೊಳ್ಳೂರು, ನಳಿನ್ ಕುಮಾರ್ ಕುಕ್ಕುಜೆ ಕಿರಿಯ ಅಭಿಯಂತರರು ಸಿವಿಲ್, ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ದೊಡ್ಡಿ ಹಿತ್ಲು,
ಶಾಲಾ ಪ್ರವೇಶದ್ವಾರ ನೀಡಿ ಸಹಕರಿಸಿದ ನಿವೃತ್ತಿ ಶಿಕ್ಷಕಿ ಶ್ರೀಮತಿ ರತ್ನಾವತಿ ಅನಂತಭಟ್ ಕನಿಯಾಳ ಇವರುಗಳನ್ನು ಶಾಲಾ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್. ಡಿ.ಎಂ. ಸಿ ಅಧ್ಯಕ್ಷರು, ಉಪಾಧ್ಯಕ್ಷರು ಶಾಲಾ ಮುಖ್ಯ ಶಿಕ್ಷಕರು ಶಾಲಾ ನಾಯಕ ಮತ್ತು ರಾಧಾಕೃಷ್ಣ ಬೊಳ್ಳೂರು , ಗ್ರಾಮ ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.