‘ರವಿಕೆ ಪ್ರಸಂಗ’ ಸಿನಿಮಾದ ಮೊದಲ ಪ್ರದರ್ಶನಕ್ಕೆ ಸುಳ್ಯದಲ್ಲಿ ಅದ್ದೂರಿ ಚಾಲನೆ

0

ಸುಳ್ಯದ ಕುವರನನ್ನು ಬೆಳೆಸಿ, ಪ್ರೋತ್ಸಾಹಿಸಿ : ಎಂ. ವೆಂಕಪ್ಪ ಗೌಡ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ಸುಳ್ಯದ ಕುವರ ಸಂತೋಷ್ ಕೊಡೆಂಕೇರಿ ನಿರ್ದೇಶನದ ‘ರವಿಕೆ ಪ್ರಸಂಗ’ ಸಿನಿಮಾ ರಾಜ್ಯಾದ್ಯಂತ ಇಂದಿನಿಂದ ಪ್ರದರ್ಶನ ಕಾಣುತ್ತಿದ್ದು, ಸುಳ್ಯದ ಸಂತೋಷ್ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನಕ್ಕೆ ಫೆ.16ರಂದು ಚಾಲನೆ ನೀಡಲಾಯಿತು.

ನ.ಪಂ.ಸದಸ್ಯ ಎಂ. ವೆಂಕಪ್ಪ ಗೌಡರು ಕನ್ನಡ ಧ್ವಜ ಹಾರಿಸಿ, ಪಟಾಕಿ ಸಿಡಿಸಿ, ತೆಂಗಿನ ಕಾಯಿ ಒಡೆಯುವುದರ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನಮ್ಮೂರ ಕುವರನ ಸಿನಿಮಾ ಬೆಳ್ಳಿ ತೆರೆ ಮೇಲೆ ಬಂದಿರುವುದು ನಮಗೆಲ್ಲರಿಗೂ ಹೆಮ್ಮೆ, ಹಳ್ಳಿ ಪ್ರತಿಭೆಯನ್ನು ನಾವೆಲ್ಲರು ಸೇರಿ ಪ್ರೋತ್ಸಾಹಿಸೋಣ ಹಾಗೂ ಚಿತ್ರದ ಯಶಸ್ಸಿಗೆ ಮತ್ತು ಚಿತ್ರ ತಂಡದ ಕಲಾವಿದರಿಗೆ ಶುಭ ಹಾರೈಸಿದರು.

ಹಾಗೂ ಸುಳ್ಯ ಪೊಲೀಸ್ ಠಾಣೆಯ ಎಎಸ್‌ಐ ಉದಯ ಕುಮಾರ್, ನ.ಪಂ.ಸದಸ್ಯ ಗೋಕುಲ್ ದಾಸ್ ಪಂಡಿತ್, ಸಂತೋಷ್ ಅವರ ತಂದೆ ನಿವೃತ್ತ ಪಾಂಶುಪಾಲ, ನ.ಪಂ.ಸದಸ್ಯ ಬಾಲಕೃಷ್ಣ ಕೊಡೆಂಕೇರಿ ಮಾತಾನಾಡಿ ಶುಭ ಹಾರೈಸಿದರು.

ನ.ಪಂ.ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ, ರಜಾಕ್ , ಶಶಿಧರ ಎಂ.ಜೆ., ನಂದರಾಜ್ ಸಂಕೇಶ, ನ.ಪಂ.ಸದಸ್ಯೆ ಶಿಲ್ಪಾ ಸುದೇವ್, ಸುಮತಿ ನಾಯಕ್, ಸುಶ್ಮಿತ ಜಾಕೆ ಸೇರಿದಂತೆ ಸಿನಿಮಾದಲ್ಲಿ ನಟಿಸಿದ ತಾರಾ ಬಳಗ, ಪ್ರೇಕ್ಷಕರು ಉಪಸ್ಥಿತರಿದ್ದರು.

ಸಾಹಿತಿ, ಜ್ಯೋತಿಷಿ ಎಚ್.ಭೀಮರಾವ್ ವಾಷ್ಠರ್ ಕಾರ್ಯಕ್ರಮ ನಿರೂಪಿಸಿ, ಭವಾನಿಶಂಕರ ಕಲ್ಮಡ್ಕ ವಂದಿಸಿದರು.

ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದ್ದು , ಸುಳ್ಯ ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಉತ್ತಮ ಸಿನಿಮಾವಾಗಿದ್ದು, ಕುಟುಂಬ ಸಮೇತರಾಗಿ ಬಂದು ನೋಡಬಹುದು ಎನ್ನುತ್ತಿದ್ದಾರೆ ಪ್ರೇಕ್ಷಕರು.