ಒಡಿಯೂರು ರಥೋತ್ಸವದ ಅಂಗವಾಗಿ ಸುಳ್ಯ ತಾಲೂಕಿನಿಂದ ಹಸಿರುವಾಣಿ

0

ಒಡಿಯೂರು ಶ್ರೀ ಗುರುದೇವಾ ದತ್ತ ಸಂಸ್ಥಾನಮ್ ಒಡಿಯೂರು ಇಲ್ಲಿ ಫೆ. ೧೮,೧೯ರಂದು ನಡೆಯುವ ತುಳುನಾಡ ಜಾತ್ರೆ ಮತ್ತು ಒಡಿಯೂರು ರಥೋತ್ಸವ ದ ಅಂಗವಾಗಿ ಸುಳ್ಯ ತಾಲೂಕಿನ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮತ್ತು ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಹಸಿರುವಾಣಿ ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಜಂಟಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಗುರು ಬಂಧುಗಳು,ಸಹಕಾರಿಯ ಮತ್ತು ಗ್ರಾಮ ವಿಕಾಸ ಯೋಜನಾ ಸಿಬ್ಬಂದಿಯವರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.