ಕೊಯನಾಡು :ಸುನ್ನಿ ಮುಸ್ಲಿಂ ಜುಮಾ ಮಸೀದಿ 26 ನೇ ಸ್ವಲಾತ್ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೊಡಗು ಸಂಪಾಜೆ ಗ್ರಾಮದ ಕೊಯಾನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿ 26 ನೇ ಸ್ವಲಾತ್ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಫೆ 16 ಬಿಡುಗಡೆ ಮಾಡಲಾಯಿತು.

26 ನೇ ಸ್ವಲಾತ್ ವಾರ್ಷಿಕೋತ್ಸವವು ಫೆಬ್ರವರಿ 24 ನೇ ತಾರೀಕಿನಂದು ಮಸೀದಿ ವಠಾರದಲ್ಲಿ ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ದುಃಆ ನೇತೃತ್ವವನ್ನು ಬಹು ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರ್ ತಂಙಳ್ ನೆರೆವೇರಿಸಲಿದ್ದಾರೆ . ಅಬ್ದುರ್ರಝಾಕ್ ಅಬ್ರಾರಿ ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಝಾಕ್, NIA ಅಧ್ಯಕ್ಷರಾದ ಅಬ್ದುಲ್ ನಝೀರ್ ಮಾಡಶೇರಿ, ಖತೀಬರಾದ ಹಮೀದ್ ಅಮ್ಜದಿ, ಸದರ್ ಉಸ್ತಾದ್ ಹಂಝ ಸಅದಿ , ದೇವರಕೋಲ್ಲಿ ಇಮಾಂ ಜಲೀಲ್ ಸಖಾಫಿ, KJMRCC ಅಧ್ಯಕ್ಷರಾದ ಅಲವಿ ಕುಟ್ಟಿ, ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಎಸ್ ಪಿ, ಇಸ್ಮಾಯಿಲ್ ಪಿ ಕೆ, ಕಾರ್ಯದರ್ಶಿಯಾದ ಹಸೈನಾರ್ ಅಮೈ, ಸಲಹಾ ಸಮಿತಿ ಸದಸ್ಯರಾದ ಹನೀಫ್ ಎಸ್ ಪಿ NIA ಸದಸ್ಯರಾದ ಉಸ್ಮಾನ್ ಎಂ.ಹೆಚ್, ರುನೈಝ್ ಎಸ್.ಎ , ಹಾಗೂ ಇನ್ನಿತರು ಸದಸ್ಯರು ಜಮಾಅತರು ಉಪಸ್ಥಿತರಿದ್ದರು.