ಗುತ್ತಿಗಾರು: ಅರಿವು ಕೇಂದ್ರದಲ್ಲಿ ವಸತಿ ಶಾಲಾ ಪ್ರವೇಶ ಪರೀಕ್ಷೆ ತರಬೇತಿ ಸಮಾರೋಪ

0

ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಗುತ್ತಿಗಾರು, ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಗುತ್ತಿಗಾರು ,ಗುತ್ತಿಗಾರು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ನವೋದಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷೆ ತರಬೇತಿ ಕೇಂದ್ರ ಗುತ್ತಿಗಾರು ಇದರ ಸಮಾರೋಪ ಫೆ.11 ರಂದು ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ನಿವೃತ್ತ ಹಿಂದಿ ಶಿಕ್ಷಕರು ಪರಶುರಾಮ ಪೂಜಾರಿಕೋಡಿ ಮಾತನಾಡಿ ಅವಕಾಶಗಳು ವಿಫುಲವಾಗಿ ದೊರೆಯುತ್ತವೆ ಆದರೆ ಅದರ ಸದ್ಬಳಕೆ ಮಾಡಿಕೊಳ್ಳುವ ಛಲ ಮಕ್ಕಳಲ್ಲಿ ಆಗಬೇಕು; ನನ್ನಿಂದ ಸಾಧ್ಯವಿಲ್ಲ ಎಂಬುದನ್ನು ಕಿತ್ತು ಹಾಕಿ ಸಾಧ್ಯ ಎಂಬ ಧೃಡ ನಿಶ್ಚಯ ಮಾಡಿ ಗೆಲುವು ದೊರೆಯುತ್ತದೆ ಎಂದರು. ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಸಂವಿಧಾನದ ಪ್ರಸ್ತಾವನೆಯ ಕಂಠಪಾಠ ಸ್ಪರ್ಧೆಯ ವಿಜೇತರಾದ ಮೇಘನಾಶ್ರೀ, ಚಿನ್ಮಯಿ ಮತ್ತು ಹರ್ಷಿಣಿ ಇವರನ್ನು ಅಭಿನಂದಿಸಲಾಯಿತು. ಪ್ರಸ್ತುತ ಶೈಕ್ಷಣಿಕ ವರ್ಷದ ಅದೃಷ್ಟ ವಿದ್ಯಾರ್ಥಿಯರಾದ ಮೇಘನಾ ಮತ್ತು ತುಷಾಂತ್ ಇವರನ್ನು ಚೀಟಿ ಎತ್ತುವ ಮೂಲಕ ಗುರುತಿಸಿ ಪ್ರೋತ್ಸಾಹಿಸಿದರು. ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರಾದ ಶಿವಪ್ರಸಾದ್, ತೇಜಾವತಿ ಅನಿಸಿಕೆ ವ್ಯಕ್ತಪಡಿಸಿದರು.


ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ದಿವ್ಯ ಸುಜನ್ ಗುಡ್ಡೆಮನೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವಿದ್ಯಾರ್ಥಿ ಧನ್ಯಶ್ರೀ ತಂಡ ಪ್ರಾರ್ಥಿಸಿದರು. ಲಿತಿಕಾ ಸ್ವಾಗತಿಸಿದರು. ಚಿನ್ಮಯಿ ವಂದಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಶಿಕ್ಷಕಿ ಶ್ರೀಮತಿ ಅಭಿಲಾಷ ಮೋಟ್ನೂರು ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು.