ಧರ್ಮಸ್ಥಳ ಒಕ್ಕೂಟದ ಸಂಪೂರ್ಣ ಸುರಕ್ಷಾ ಯೋಜನೆಯ ನೋಂದಾವಣೆ ಮತ್ತು ಹಿಡುವಳಿ ಯೋಜನೆ ಅನುಷ್ಠಾನ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಇದರ ಪರಿವಾರಕಾನ ಒಕ್ಕೂಟದ ಸದಸ್ಯರಿಗೆ 2024 -25 ನೇ ಸಾಲಿನ ಸಂಪೂರ್ಣ ಸುರಕ್ಷಾ ನೋಂದಾವಣೆ ಹಾಗೂ ಹಿಡುವಳಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸಂಘದ ಸದಸ್ಯೆ ಗೀತಾ ರವರ ಮನೆಯಲ್ಲಿ ಇಂದು ಚಾಲನೆ ನೀಡಲಾಯಿತು.


ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ರತೀಶನ್ ಅರಂಬೂರು ದೀಪ ಬೆಳಗಿಸಿದರು. ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಸರಳಿಕುಂಜ, ಪಂಚಾಯತ್ ಸದಸ್ಯೆ ಅನಿತಾ ಇದ್ಯಡ್ಕ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ, ಒಕ್ಕೂಟದಪದಾಧಿಕಾರಿಗಳಾದ ಹಿಮಕರ,ಯೋಗೀಶ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.