ಗಾಯಕಿ ಶ್ರೀಮತಿ ಸಂಧ್ಯಾ ಮಂಡೆಕೋಲುರಿಗೆ ಸಾಧನ ಶ್ರೀ ಪ್ರಶಸ್ತಿ

0

ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ರಾಯಚೂರು ಇವರು ಕೊಡ ಮಾಡುವ ಸಾಧನ ಶ್ರೀ ಪ್ರಶಸ್ತಿಗೆ ಮಂಡೆಕೋಲು ಗ್ರಾಮದ ಗಾಯಕಿ ಶ್ರೀಮತಿ ಸಂಧ್ಯಾ ಮಂಡೆಕೋಲು ಭಾಜನರಾಗಿದ್ದು, ಫೆ.18ರಂದು ರಾಯಚೂರಿನಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದ್ದು, ಸಂಧ್ಯಾರವರು ಬರೆದ ಕವನವೊಂದು ಬೆಳಕು ತೋರಣ ಕವನ ಸಂಕಲನದಲ್ಲಿ ಪ್ರಕಟವಾಗಿದ್ದು ಆ ಕವನ ಸಂಕಲನವೂ ಸಮಾರಂಭದಲ್ಲಿ ಬಿಡುಗಡೆಯಾಗಿದೆ.