ಜಯನಗರ : ಗ್ಯಾಸ್ ಸಿಲಿಂಡರ್ ಕಳ್ಳತನ

0

ಖಾಲಿ ಸಿಲಿಂಡರ್ ಇಟ್ಟು ಗ್ಯಾಸ್ ತುಂಬಿದ್ದ ಸಿಲಿಂಡರ್ ಹೊತ್ತೊಯ್ದ ಭೂಪ

ಮನೆಯ ಹಿಂಬದಿ ಗ್ಯಾಸ್ ಒಲೆಗೆ ಒರಿಸಲಾಗಿದ್ದ ಸಿಲಿಂಡರನ್ನು ಕಳವುಗೈದು ತಾನು ತಂದ ಖಾಲಿ ಸಿಲಿಂಡರನ್ನು ಅಲ್ಲಿರಿಸಿ ಹೋದ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ.ಸುಳ್ಯ ಜಯನಗರ ನಿವಾಸಿ ದಿ. ನೌಶಾದ್ ಎಂಬುವವರ ಮನೆಯ ಹಿಂಬದಿಯಲ್ಲಿ ಗ್ಯಾಸ್ ಒಲೆಗೆ ಅಳವಡಿಸಲಾಗಿದ್ದ ಗ್ಯಾಸ್ ತುಂಬಿದ್ದ ಸಿಲೆಂಡರ್ ಕಳ್ಳತನವಾಗಿದ್ದು, ಘಟನೆ ಫೆಬ್ರವರಿ ೧೮ರಂದು ಸಂಜೆ ೭ ಗಂಟೆ ಗೆ ಈ ಘಟನೆ ನಡೆದಿದೆ.

ಕಳ್ಳತನ ನಡೆದ ಮನೆಯಲ್ಲಿ ಮಹಿಳೆ ಮತ್ತು ಮಕ್ಕಳು ಮಾತ್ರ ಇದ್ದು ಮನೆಯವರು ಮನೆಯ ಒಳಗೆ ಇರುವ ಸಂದರ್ಭದಲ್ಲಿ ಮನೆಯ ಹಿಂಬದಿಗೆ ಬಂದ ಖದೀಮ ತಾನು ತಂದಿದ್ದ ಖಾಲಿ ಇಂಡಿಯನ್ ಸಿಲೆಂಡರನ್ನು ಅಲ್ಲಿ ಇರಿಸಿ ಮನೆಯವರು ಅಳವಡಿಸಿದ್ದ ನೂತನ ಎಚ್‌ಪಿ ಸಿಲಿಂಡರನ್ನು ಹೊತ್ತು ಪರಾರಿಯಾಗಿದ್ದಾನೆ.

ರಾತ್ರಿ ಎಂಟು ಗಂಟೆಗೆ ಮನೆಯವರು ಗ್ಯಾಸ್ ಸ್ಟವ್ ಉರಿಸಲು ಹೋದಾಗ ಒಲೆ ಉರಿಯದೆ ಇದ್ದಾಗ ಬಾಗಿಲು ತೆಗೆದು ಹೊರ ಹೋಗಿ ಗ್ಯಾಸ್ ಸಿಲಿಂಡರ್ ಪರಿಶೀಲಿಸಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಈ ಮನೆಯ ಯಜಮಾನ ಕಳೆದ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕುಟುಂಬ ಕಳೆದ ಒಂದು ವಾರದ ಮೊದಲು ಕುಟುಂಬಸ್ಥರ ಸಹಾಯ ಪಡೆದು ನೂತನ ಸಿಲೆಂಡರ್ ಅನ್ನು ಖರೀದಿಸಿದ್ದರು. ಇದೀಗ ಆ ಸಿಲೆಂಡರ್ ಕಳ್ಳತನವಾಗಿರುವುದು ಮನೆಯವರನ್ನು ಇನ್ನೂ ಹೆಚ್ಚು ಸಂಕಷ್ಟಕ್ಕೆ ದೂಡಿದೆ.