ಸುಳ್ಯ ರೋಟರಿ ಪ್ರೌಢಶಾಲೆಯಲ್ಲಿ ಮಾಹಿತಿ ಕಾರ್ಯಗಾರ

0

ಏರೋ ಕ್ಲಬ್ ನಿಟ್ಟೆ ಎನ್ .ಎಮ್ .ಎ .ಎಮ್ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ರೋಟರಿ ಕ್ಲಬ್ ಸುಳ್ಯ ,ರೋಟರಿ ಕ್ಲಬ್ ಸುಳ್ಯ ಸಿಟಿ ಹಾಗೂ ಇಂಟರಾಕ್ಟ್ ಕ್ಲಬ್ ರೋಟರಿ ಪ್ರೌಢಶಾಲೆ ಮಿತ್ತಡ್ಕ ಆಯೋಜಿಸಿದ “ಏರೋಗ್ಯಾನ್ ” ಮಾನವ ರಹಿತ ವೈಮಾನಿಕ ವಾಹನ ದ ಕುರಿತು ಪ್ರಸ್ತುತಿ ಮತ್ತು ಪ್ರದರ್ಶನ ರೋಟರಿ ಪ್ರೌಢಶಾಲೆ ಮಿತ್ತಡ್ಕದಲ್ಲಿ ಫೆ.17 ರಂದು ನಡೆಯಿತು.

ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಆನಂದ ಖಂಡಿಗ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಸಿಟಿ ಕ್ಲಬ್ ನ ಅಧ್ಯಕ್ಷರಾದ ರೋ. ಗಿರೀಶ್ ನಾರ್ಕೋಡು ಸ್ವಾಗತಿಸಿದರು.

ರೋಟರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವೀಣಾ ಶೇಡಿಕಜೆ ಶುಭ ಹಾರೈಸಿದರು. ಕು. ಅಪೂರ್ವ, ಕು.ಭೂಮಿಕ,ಕು. ಮನುಜ್ಞಾ,ಕು. ತೃಷಾ ಪ್ರಾರ್ಥಿಸಿದರು. ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಕು.ಹಿಮಾನಿ ವಂದಿಸಿದರು.ಇಂಟರಾಕ್ಟ್ ಸದಸ್ಯೆ ಕು.ನಿರೀಕ್ಷಾ ಸುಲಯ ನಿರೂಪಿಸಿದರು.ಶಿಕ್ಷಕಿ.ರಮ್ಯಾ.ಅಡ್ಕಾರು ಸಹಕರಿಸಿದರು.