ವೀಕ್ಷಿತ್‌ ಕುತ್ಯಾಳರಿಗೆ ಸುಳ್ಯ ಜೆಸಿ‌ ಪಯಸ್ವಿನಿ ವತಿಯಿಂದ ಯುವ ಸಾಧಕ ಪ್ರಶಸ್ತಿ ಪ್ರದಾನ

0

ಜೆಸಿಐ ಸುಳ್ಯ ಪಯಸ್ವಿನಿ ಎಲ್ ಒ ಬಿ ಜಿ ಸಭೆಯಲ್ಲಿ ಯುವ ದಿನಾಚರಣೆ ಪ್ರಯುಕ್ತ ಯುವ ಕೊಳಲು ವಾದಕ ವೀಕ್ಷೀತ್ ಗೌಡ ಕುತ್ಯಾಳರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಫೆ.23ರಂದು ಸನ್ಮಾನಿಸಲಾಯಿತು.

ಸನ್ಮಾನವನ್ನು ವಲಯ 15ರ ವಲಯ ಉಪಾಧ್ಯಕ್ಷ ಅಭಿಷೇಕ್ ಜಿ.ಎಂ. ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಜೇಸಿ ಅಧ್ಯಕ್ಣ ಗುರುಪ್ರಸಾದ್ ನಾಯಕ್ ವಹಿಸಿದ್ದರು.
ವಲಯ 15 ರ ಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರು, ನಿಕಟ ಪೂರ್ವಾಧ್ಯಕ್ಷ ನವೀನ್ ಕುಮಾರ್, ಪೂರ್ವಾಧ್ಯಕ್ಷರಾದ ದೇವರಾಜ್ ಕುದ್ಪಾಜೆ, ರಂಜಿತ್ ಕುಕ್ಕೆಟ್ಟಿ , ಗುರುರಾಜ್ ಅಜ್ಜಾವರ, ಕಾರ್ಯದರ್ಶಿ ಪ್ರಕಾಶ್ ಪಿ ಎಸ್, ಜೆಜೆಸಿ ಅಂಕಿತ್, ಶಸ್ಮಿ ಭಟ್ ಅಜ್ಜಾವರ, ಅಭಿಷೇಕ್ ಗುತ್ತಿಗಾರು, ಚರಿಶ್ಮ, ರಮ್ಯ ರಂಜಿತ್, ಗೀತಾಂಜಲಿ ಗುರುರಾಜ್, ಉಷಾ ನವೀನ್, ಮಂಜುನಾಥ್, ಧನುಷ್ ಕುಕ್ಕೆಟ್ಟಿ , ಶೋಭಾ ಚೂಂತಾರು , ತಾರ ಮಾಧವ ಗೌಡ ಚೂಂತಾರ್, ವೀಕ್ಷೀತ್ ಗೌಡ ಕುತ್ಯಾಳರ ಮನೆಯವರು ಉಪಸ್ಥಿತರಿದ್ದರು.