ಅಕ್ರಮ ಗೋ ಸಾಗಾಟ ಪ್ರಕರಣ

0

ಆರೋಪಿ ಬಂಧನ ; ಜಾನುವಾರು ಸಹಿತ ವಾಹನ ವಶ

ಅಕ್ರಮವಾಗಿ ಗೋ ಸಾಗಾಟ ಮಾಡಿದ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಜಾನುವಾರು ಸಹಿತ ವಾಹನ ವಶಪಡಿಸಿಕೊಳ್ಳಲಾಗಿದೆ.

ನಿನ್ನೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಅನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸುಳ್ಯ ನಗರ ಬಜರಂಗದಳದ ಕಾರ್ಯಕರ್ತರು ವಾಹನವೊಂದನ್ನು ಸುಳ್ಯದ ಜ್ಯೋತಿ ಸರ್ಕಲ್ ಬಳಿ ತಡೆದು ನಿಲ್ಲಿಸಿದ್ದರು.

ಸುಳ್ಯ ಎಸ್.ಐ. ಈರಯ್ಯ ದೂಂತೂರು ಮತ್ತು ಸಿಬ್ಬಂದಿಗಳು ಸ್ಳಳಕ್ಕೆ ಧಾವಿಸಿ ಆರೋಪಿ ಸುಲ್ತಾನ್ ಬತ್ತೇರಿಯ ಬಿಬಿನ್ ಪೌಲೋಸ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದು, ಮೂರು ಜಾನುವಾರುಗಳ ಸಹಿತ ವಾಹನವನ್ನು ವಶಕ್ಕೆ ಪಡೆಯಲಾಗಿದೆ.