ಸುಳ್ಯ ರಾಮ ಮಂದಿರದಲ್ಲಿ ಮಹಾಗಣಪತಿ, ಮೂಕಾಂಬಿಕೆ, ಸೀತಾಲಕ್ಷ್ಮಣ ಆಂಜನೇಯ ಸಮೇತಶ್ರೀ ರಾಮ ದೇವರ ಪುನರ್ ಪ್ರತಿಷ್ಠೆ- ಬ್ರಹ್ಮ ಕಲಾಶಭಿಷೇಕ

0

ಸುಳ್ಯ ನಗರದ ರಾಮ ಪೇಟೆಯಲ್ಲಿರುವ ಸುಮಾರು 80 ವರ್ಷ ಇತಿಹಾಸ ಹೊಂದಿರುವ ಶ್ರೀ ರಾಮ ಮಂದಿರದಲ್ಲಿ ಶ್ರೀ ಮಹಾಗಣಪತಿ, ಶ್ರೀ ಮೂಕಾಂಬಿಕಾ, ಶ್ರೀ ಸೀತಾ ಲಕ್ಷ್ಮಣ ಆಂಜನೇಯ ಸಮೇತ ಶ್ರೀ ರಾಮ ದೇವರ ಪುನರ್ ಪ್ರತಿಷ್ಠೆ ಹಾಗೂ ದೇವರಿಗೆ ಬ್ರಹಕಲಾಶಭಿಷೇಕವು ಇಂದು ಬೆಳಗ್ಗೆ ವೃಷಭ ಲಗ್ನದ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಮಧೂರು ರಾಜೇಶ ಸರಳಾಯ ರವರ ನೇತೃತ್ವದಲ್ಲಿ ಜರುಗಿತು.


ಪ್ರಾತ:ಕಾಲದಲ್ಲಿ ಕವಾಟೋದ್ಘಾಟನೆಯಾಗಿ ಗಣಪತಿ ಹವನದ ಬಳಿಕ‌ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.