ಐವರ್ನಾಡಿನ ಕೃಷಿಕ ನವೀನ್ ಚಾತುಬಾಯಿ ಯವರಿಗೆ ವಿಕ ಸೂಪರ್ ಸ್ಟಾರ್ ರೈತ ಜಿಲ್ಲಾ ಪ್ರಶಸ್ತಿ

0

ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ಸಿ.ಕೆ. ನವೀನ್ ಚಾತುಬಾಯಿ ಅವರಿಗೆ ವಿಜಯ ಕರ್ನಾಟಕ ಪತ್ರಿಕೆ ಕೊಡ ಮಾಡುವ ಸೂಪರ್ ಸ್ಟಾರ್ ರೈತ ಜಿಲ್ಲಾ ಪ್ರಶಸ್ತಿ ಲಭಿಸಿದೆ. ಬಂಟ್ವಾಳದ ಒಡಿಯೂರಿನ ಜ್ಞಾನ ಮಂದಿರ ಸಭಾಭವನದಲ್ಲಿ ಫೆ. 25 ರಂದು ನಡೆದ ಸಮಾರಂಭದಲ್ಲಿ ನವೀನ್ ಚಾತುಬಾಯಿಯವರು ಪ್ರಶಸ್ತಿ ಸ್ವೀಕರಿಸಿದರು.


ದ.ಕ.ಜಿಲ್ಲೆಯಲ್ಲಿ 8 ಮಂದಿ ಸಾಧಕ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.ಕಳೆದ ಆರು ವರ್ಷಗಳಿಂದ ವಿಕೆ ಪತ್ರಿಕೆ ಸಮಗ್ರ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ.
ನವೀನ್ ಚಾತುಬಾಯಿಯವರು ಐವರ್ನಾಡು ಮಾಜಿ ಗ್ರಾ. ಪಂ. ಸದಸ್ಯರಾಗಿ,ಸುಳ್ಯದ ಮಹಶೀರ್ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರಾಗಿ, ಕೃಷಿ ಇಲಾಖೆಯ ಆತ್ಮ ಯೋಜನೆಯ ರಾಜ್ಯ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.ಅಲ್ಲದೆ ಇವರು ಸಿಹಿ ನೀರಿನ ಮುತ್ತು ಕೃಷಿಯನ್ನು ಮಾಡುತ್ತ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯಾದ್ಯಂತ ಗುರುತಿಸಿಕೊಂಡಿರುತ್ತಾರೆ.