ಮುಳ್ಯ-ಅಟ್ಲೂರಿನಲ್ಲಿ ವಿಜೃಂಭಿಸಿದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

0

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ 30ನೇ ವರ್ಷದ ಸೇವೆಯಾಟವಾಗಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಅದ್ಧೂರಿಯಾಗಿ ವಿದ್ಯುದ್ದಾಲಂಕರಿತ ದೀಪಗಳಿಂದ ಫೆ.27ರಂದು ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರು ಗಣೇಶನಗರದ ಶ್ರೀ ಮಹಾಗಣಪತಿ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಸಂಜೆ ಚೌಕಿ ಪೂಜೆ ನಡೆದು ಬಳಿಕ ಸಂಜೆ 6 ಗಂಟೆಯಿಂದ ಯಕ್ಷಗಾನ ಬಯಲಾಟ ನಡೆಯಿತು. ಸಂಜೆ ಸೇರಿದ ಜನರಿಗೆ ಚಾ,ತಿಂಡಿ, ರಾತ್ರಿ ಅನ್ನಸಂತರ್ಪಣೆ ನಡೆಯಿತು.