ಪ್ರೊಟೊಕಾಲ್ ಸಮಸ್ಯೆ : ಗುತ್ತಿಗಾರು ಶಾಲಾ ಕಾರ್ಯಕ್ರಮ ರದ್ದು

0

ಪ್ರೊಟೊ ಕಾಲ್ ‌ಸಮಸ್ಯೆಯಾಗಿದೆ ಎಂದು ಗುತ್ತಿಗಾರು ಮಾ.ಹಿ.ಪ್ರಾ ‌ಶಾಲೆಯಲ್ಲಿ ಇಂದು ನಡೆಯಬೇಕಾಗಿದ್ದ ಪಿ.ಎಂ.ಶ್ರೀ ಶಾಲಾ ಉದ್ಘಾಟನಾ ಕಾರ್ಯಕ್ರಮ ರದ್ದುಗೊಂಡಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಅವರನ್ನು ಸಂಪರ್ಕಿಸಿದಾಗ ಬಿ.ಇ.ಒ ಮತ್ತು ಪಿ.ಎಂ.ಶ್ರೀ ಯೋಜನೆಯ ದ.ಕ ಜಿಲ್ಲಾ ಡಿ.ಡಿ ಅವರು ಮುಖ್ಯೋಪಾಧ್ಯಾಯಿನಿಯವರಿಗೆ ಕರೆ ಮಾಡಿ ಪ್ರೊಟೊಕಾಲ್ ಪಾಲಿಸಿಲ್ಲ ಎಂದು ತಿಳಿಸಿ ಕಾರ್ಯಕ್ರಮ ರದ್ದುಗೊಳಿಸಬೇಕೆಂದು ಹೇಳಿದ್ದಾರೆ. ಅದನ್ನು ಮುಖ್ಯೋಪಾಧ್ಯಾಯಿನಿ ಅವರು ನಮ್ಮ ಬಳಿ ಹೇಳಿಕೊಂಡಿದ್ದು, ನಾವು ಎಸ್.ಡಿ.ಎಂ.ಸಿ ಸಭೆ ಕರೆದು ಮುಖ್ಯೋಪಾಧ್ಯಾಯರಿಗೆ ಏನೂ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಕಾರ್ಯಕ್ರಮ ಮುಂದೂಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮುಖ್ಯೋಪಾಧ್ಯಾಯಿನಿ ಉಮಾವತಿ ಅವರನ್ನು ಸಂಪರ್ಕಿಸಿದಾಗ ಪ್ರೊಟೊಕಾಲ್ ಪಾಲನೆ ಸರಿಯಾಗಿಲ್ಲ ಎಂಬ ವಿಚಾರವಾಗಿ ಕಾರ್ಯಕ್ರಮ ಸ್ಥಗಿತ ಮಾಡುವಂತೆ ಮೇಲಾಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಕಾರ್ಯಕ್ರಮ ಮುಂದೂಡುವಂತೆ ಎಸ್‌. ಡಿ.ಎಂ.ಸಿ ಅವರಿಗೆ ಕೇಳಿಕೊಳ್ಳಲಾಗಿದ್ದು ಇಂದಿನ ಕಾರ್ಯಕ್ರಮ ಮುಂದೂಡಲಾಗಿದೆ.