ಸುಳ್ಯ ಪೊಲೀಸ್ ಠಾಣೆಗೆ ನೂತನ ಎಎಸ್ಐ ಸುಂದರ ಶೆಟ್ಟಿ ಕರ್ತವ್ಯಕ್ಕೆ ಹಾಜರು

0

ಸುಳ್ಯ ಪೊಲೀಸ್ ಠಾಣೆಗೆ ನೂತನ ಎಎಸ್ಐ ಆಗಿ ಸುಂದರ ಶೆಟ್ಟಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮೂಲತ:ಪುತ್ತೂರು ತಾಲೂಕಿನ ನೆಲ್ಯಾಡಿ ಗ್ರಾಮದ ಇವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಸ್ತುತ ಎ ಎಸ್ ಐ ಆಗಿ ಭಡ್ತಿಗೊಂಡು ಸುಳ್ಯ ಠಾಣೆಗೆ ಬಂದಿರುತ್ತಾರೆ.


ಕಳೆದ 28 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಉಡುಪಿ, ಮಂಗಳೂರು, ಬಂಟ್ವಾಳ, ಮಂಗಳೂರು ಇಂಟೆಲಿಜೆನ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ನೆಲ್ಯಾಡಿ ಗ್ರಾಮದ ದಿ. ರಾಮಣ್ಣ ಶೆಟ್ಟಿ ಮತ್ತು ದಿ ಯಮುನಾ ದಂಪತಿಗಳ ಪುತ್ರರಾಗಿದ್ದಾರೆ.