ಸುಳ್ಯ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಇಂದಿರಾ ಬಿ ಕೆ ಆಯ್ಕೆ

0

ಸುಳ್ಯ ಮಂಡಲದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಂಡಲದ ಮಾಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ಇಂದಿರಾ ಬಿ.ಕೆ. ಅವರು ಆಯ್ಕೆಯಾಗಿದ್ದಾರೆ.

ಮೂಲತಃ ಕಡಬ ತಾಲೂಕಿನ ಸವಣೂರಿನ ಪಾಲ್ತಾಡಿಯ ಬಂಬಿಲದವರಾದ ಶ್ರೀಮತಿ ಇಂದಿರಾ ಬಿ. ಕೆ. ಅವರು ಸ್ನೇಹ ನವೋದಯ ಸ್ವಸಹಾಯ ಸಂಘದ ಅಧ್ಯಕ್ಷೆಯಾಗಿ, ಸವಣೂರಿನ ಮಂಜುನಾಥನಗರ ಸಿದ್ಧಿವಿನಾಯಕ ಸೇವಾ ಸಂಘದ ಗೌರವ ಸಲಹೆಗಾರಾಗಿ, ಪುತ್ತೂರಿನ ವಿವೇಕಾನಂದ ಯುವಕ ಮಂಡಲದ ಗೌರವ ಸಲಹೆಗಾರರಾಗಿ, ಅರುಂದತಿ ಮಾತೃ ಮಂಡಳಿಯ ಮಾಜಿ ಅಧ್ಯಕ್ಷರಾಗಿ, ವಿಷ್ಣು ಪ್ರಿಯ ಮಹಿಳಾ ಭಜನಾ ಮಂಡಳಿಯ ಕಾರ್ಯದರ್ಶಿಯಾಗಿ, ಸವಣೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿ, ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆಯಾಗಿ, ಗ್ರಾಮ ವಿಕಾಸ ಮಹಿಳಾ ಕಾರ್ಯದ ಜಿಲ್ಲಾ ಟೋಳಿ ಸದಸ್ಯೆಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.