







ಮಂಗಳೂರಿನ ಎಸ್.ಪಿ.ಕಚೇರಿಯ ಡಿ.ಎ.ಆರ್. ಘಟಕದಲ್ಲಿ ಎ.ಎಸ್.ಐ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಾಯ ಕಲ್ಪಣೆಯವರು ಪೊಲೀಸ್ ಉಪನಿರೀಕ್ಷಕರಾಗಿ ಪದೋನ್ನತಿಗೊಂಡಿದ್ದಾರೆ.
ಮಾ.01 ರಂದು ಇವರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ಪೊಲೀಸ್ ಉಪನಿರೀಕ್ಷಕರಾಗಿ ನಿಯೋಜನೆಗೊಂಡಿರುತ್ತಾರೆ.
ಕೊಡಿಯಾಲ ಗ್ರಾಮದ ಕಲ್ಪಣೆ ದಿ.ಐತ್ತಪ್ಪ ಮತ್ತು ದಿ.ಲಕ್ಷ್ಮೀ ದಂಪತಿ ಪುತ್ರರಾಗಿರುವ ಇವರು ಪತ್ನಿ ಮತ್ತು ಪುತ್ರಿಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.









