ಮಾ.9-10 : ಪೈಚಾರಿನಲ್ಲಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವ

0

ಪೈಚಾರಿನ ಸ್ವಾಮೀ ಕೊರಗ ತನಿಯ ದೈವರಾಧನಾ ಸಮಿತಿ ಇದರ ಆಶ್ರಯದಲ್ಲಿ ಮಾ.9 ಮತ್ತು 10ರಂದು ಸ್ವಾಮಿ ಕೊರಗತನಿಯ ದೈವದ ನೇಮೋತ್ಸವ ನಡೆಯಲಿರುವುದು.

ಮಾ‌.9ರಂದು ಬೆಳಿಗ್ಗೆ ಸ್ಥಳ ಶುದ್ಧಿ, ಗಣಹೋಮ, ಕಲಶಾಭಿಷೇಕ ಪೂಜೆ, ಪ್ರಸಾದ ವಿತರಣೆ ಸಾಯಂಕಾಲ ಗಂಟೆ 5-00ಕ್ಕೆ ಗುಳಿಗ ದೈವದ ನೇಮ,ಪ್ರಸಾದ ವಿತರಣೆ,ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ,ರಾತ್ರಿ ಗಂಟೆ 8-30ರಿಂದ 9-30ರ ತನಕ ದೀಪಾಂಜಲಿ ಭಜನಾ ಮಂಡಳಿಯವರಿಂದ ಭಜನೆ.

ರಾತ್ರಿ ಗಂಟೆ 10-00ಕ್ಕೆ ಸ್ವಾಮಿ ಕೊರಗತನಿಯ ದೈವದ ನೇಮ ಮಾ.10ಬೆಳಿಗ್ಗೆ ಗಂಟೆ 6-00ಕ್ಕೆ ಸ್ವಾಮಿ ಕೊರಗತನಿಯ ದೈವದ ಪ್ರಸಾದ ವಿತರಣೆ ನಡೆಯಲಿದೆ.