ಸೋಣಂಗೇರಿ : 30ನೇ ವರ್ಷದ ಏಕಾಹ ಭಜನೆ

0

ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರದಲ್ಲಿ 30ನೇ ವರ್ಷದ ಅರ್ಧ ಏಕಾಹ ಭಜನೆಯು ಮಾ.3ರಂದು ನಡೆಯಿತು.

ಬೆಳಿಗ್ಗೆ ಸೂರ್ಯೋದಯಕ್ಕೆ ದೀಪಪ್ರತಿಷ್ಠೆಯಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು‌. ರಾತ್ರಿ ದೀಪ ವಿಸರ್ಜನೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ರುಕ್ಮಯ್ಯ ಗೌಡ ಸುತ್ತುಕೋಟೆ, ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು,
ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ,
ಉಪಾಧ್ಯಕ್ಷೆ ಹರಿಣಾಕ್ಷಿ, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಖಜಾಂಜಿ ಲೀಲಾವತಿ ನಡುಮನೆ ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.