ಸುಳ್ಯ: ರೋಟರಿ ವಿದ್ಯಾ ಸಂಸ್ಥೆಯಲ್ಲಿ ಬೀಳ್ಕೊಡುಗೆ ಸಮಾರಂಭ

0

ರೋಟರಿ ವಿದ್ಯಾ ಸಂಸ್ಥೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಾ. 4ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಸುಳ್ಯದ ಅಧ್ಯಕ್ಷ ರೊ.ಆನಂದ ಖಂಡಿಗ ವಹಿಸಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಸಂಚಾಲಕ ರೊ.ಗಿರಿಜಾ ಶಂಕರ್ ತುದಿಯಡ್ಕ, ಆಡಳಿತ ಮಂಡಳಿಯ ಸದಸ್ಯರಾದ ರೊ.ಮಹಾಲಕ್ಷ್ಮೀ ಕೊರಂಬಡ್ಕ,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ , ಶಿಕ್ಷಕಿಯರಾದ ಶ್ರೀಮತಿ ಉಷಾ.ಕೆ, ಶ್ರೀಮತಿ ಜಯಶ್ರೀ.ಕೆ, ಶ್ರೀಮತಿ ಶಾಲಿನೀ ರಾಮಕೃಷ್ಣ ಮಕ್ಕಳಿಗೆ ಶುಭ ಹಾರೈಸಿದರು.

9ನೇ ತರಗತಿಯ ವಿದ್ಯಾರ್ಥಿಗಳಾದ ಯಶಸ್ವಿ ಎಸ್.ರೈ, ಹಿಮಾನಿ. ಎಂ. ಎಸ್, ಯಶಸ್ವಿ ಕೆ.ಜಿ., ಫಾತಿಮಾತ್ ಶೈಮ. ಕೆ.ಎಸ್, ಕ್ಷಿತೀಶ ರಾಮ , ಸಮೃಧ್ದ್. ಕೆ., ಪೃಥ್ವಿರಾಜ್ ಕೆ.ಆರ್, ಪ್ರಜ್ವಲ್.ಕೆ. ಆರ್. 10ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಣಮ್ಯ.ಎನ್.ಆಳ್ವ, ಮುಫೀದಾ, ಲಿಝಾ, ಗಗನ್, ಶರಧಿ ಆರ್.ಶೇಟ್, ಮಾನ್ವಿ. ಕೊಯಿಂಗಾಜೆ, ಯಶಸ್ವಿ ಪಿ.ಭಟ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ. ಕು. ಸಿಂಚನಾ, ಕು.ವಂಶಿಕಾ , ಕು.ಸಾಗರಿಕ ಪ್ರಾರ್ಥಿಸಿದರು.ವಿದ್ಯಾರ್ಥಿನಿ ಕು. ಝಿಯಾ ಫಾತಿಮಾ ಸ್ವಾಗತಿಸಿದರು.
ಕು.ಯಶ್ವಿನೀ . ಎನ್ ಹಾಗೂ ಕು.ನಿರೀಕ್ಷಾ.ಸುಳಾಯ ಕಾರ್ಯಕ್ರಮ ನಿರೂಪಿಸಿದರು.
ಕು.ಶ್ರೀಶಾಲೀ ವಂದಿಸಿದರು.