ಶ್ರೀಮತಿ ರಶ್ಮಿ ಕೊಯಿಂಗೋಡಿಯವರಿಗೆ ವಿಟಿಯುನಿಂದ ಡಾಕ್ಟರೇಟ್ ಪದವಿ ಪ್ರದಾನ

0


ಸುಳ್ಯದ ಕೊಯಿಂಗೋಡಿ ದಿ. ನಿವೃತ್ತ ಶಿಕ್ಷಕ ರವೀಂದ್ರನಾಥ ಕೊಯಿಂಗೋಡಿ ಮತ್ತು ನಿವೃತ್ತ ಶಿಕ್ಷಕಿ ಪ್ರೇಮಾರವರ ಪುತ್ರಿ ಶ್ರೀಮತಿ ರಶ್ಮಿ ಕೆ.ಆರ್.ರವರು ಮಂಡಿಸಿದ ‘Non-Newtonian Fluid Flow and Mass Transfer in an Annular Region’ ಎಂಬ ಪ್ರಬಂಧಕ್ಕೆ ( ವಿ.ಟಿ.ಯು) ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಳಗಾವಿಯ ಯುನಿವರ್ಸಿಟಿಯ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್.ವಿದ್ಯಾಶಂಕರ್‌ರಿಂದ ಮಾ. 7 ರಂದು ಡಾಕ್ಟರೇಟ್ ಪದವಿ ಸ್ವೀಕರಿಸಿದರು.


ಇವರಿಗೆ ಡಾ. ಇಂದಿರಾ ಆರ್.ರವರು ಮಾರ್ಗದರ್ಶನ ನೀಡಿದ್ದರು. ಪ್ರಸ್ತುತ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಸಕಲೇಶಪುರದ ಗೊದ್ದು ಯತಿರಾಜ್‌ರವರ ಪತ್ನಿ.