ಲಯನ್ಸ್ ಕ್ಲಬ್ ಪಂಜ : ವಿದ್ಯಾರ್ಥಿಗಳಿಗೆ, ಸೈನ್ಯಕ್ಕೆ ಸೇರುವ ಬಗ್ಗೆ ತರಬೇತಿ – ಮಾಹಿತಿ ಕಾರ್ಯಾಗಾರ

0

ಲಯನ್ಸ್ ಕ್ಲಬ್ ಪಂಜ ,ಹಾಗೂ ಪಂಚಲಿಂಗೇಶ್ವರ ಐ ಟಿ ಐ ಇವುಗಳ ಆಶ್ರಯದಲ್ಲಿ ಕೆ ಸ್ ಗೌಡ ವಿದ್ಯಾಸಂಸ್ಥೆಯ ಸಭಾಂಗಣ ದಲ್ಲಿ ಸೈನ್ಯಕ್ಕೆ ಸೇರುವ ಬಗ್ಗೆ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಸಭಾ ಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಪ ಲ ದಿಲೀಪ್ ಬಾಬ್ಲು ಬೆಟ್ಟು ವಹಿಸಿದ್ದರು.ಪಂಚಲಿಂಗೇಶ್ವರ ಐ ಟಿ ಐ ನಿಂತಿಕಲ್ಲು ಕೆ ಎಸ್ ಗೌಡ ವಿದ್ಯಾ ಸಂಸ್ಥೆಯ ಪ್ರಾಂಶು ಪಾಲರಾದ ಸುದೀರ್ ರವರು ಕಾರ್ಯ ಕ್ರಮವನ್ನು ಉದ್ಘಾಟಿಸಿದರು .

ಸಂಪನ್ಮೂಲ ವ್ಯಕ್ತಿ ಯಾಗಿ ಕ್ಯಾಪ್ಟನ್ ಸುದಾನಂದ ನಿವೃತ ಸೈನಿಕರು,ಇವರು ವಿದ್ಯಾರ್ಥಿ ಗಳಿಗೆ ಸೈನ್ಯಕ್ಕೆ ಸೇರುವ ಬಗ್ಗೆ ಮಾಹಿತಿ ನೀಡಿದರು. ತರಬೇತುದಾರರಾದ ಕ್ಯಾಪ್ಟನ್ ಸುದಾನಂದ ರವರನ್ನ ಲ.ಮಾಧವ ಗೌಡ ಜಾಕೆಯವರು ಸನ್ಮಾನಿಸಿ ಗೌರವಿಸಿದರು .

ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಸಂಯೋಜಕರಾದ ಲ.ಪ್ರವೀಣ್ ಮುಂಡೋಡಿ ,ಕೋಶಾಧಿಕಾರಿ ಲ.ಆನಂದ ಗೌಡ ಉಪಸ್ಥಿತರಿದ್ದರು.ಕಾರ್ಯಕ್ರಮದ ವೇದಿಕೆಗೆ ಪೂರ್ವಾಧ್ಯಕ್ಷ ಲ.ಸುರೇಶ್ ಕುಮಾರ್ ನಡ್ಕ ರವರು ಅತಿಥಿಗಳನ್ನ ಬರಮಾಡಿಕೊಂಡರು.ಲ.ಮೋಹನ್ದಾಸ್ ಕೂಟಾಜೆ ಧನ್ಯವಾದ ಸಮರ್ಪಿಸಿದರು.ಕಾಯಕ್ರಮದಲ್ಲಿ ಪ್ರಾಂತೀಯ ಪೂರ್ವಾಧ್ಯಕ್ಷ ಲ.ಜಾಕೆ ಮಾಧವ ಗೌಡ ,ಪೂರ್ವಾಧ್ಯಕ್ಷ ಲ.ಬಾಲಕೃಷ್ಣ ಮೂಲೆಮನೆ,ಲ.ನಾಗೇಶ್ ಕಿನ್ನಿಕುಮೇರಿ,ಲ.ಕುಸುಮಧರ ಗೌಡ ,ಲ.ಮೋಹನ್ ಎನ್ಮೂರು ,ಹಾಗೂ ವಿದ್ಯಾರ್ಥಿ ಗಳು ,ಶಿಕ್ಷಕರು ಉಪಸ್ಥಿತರಿದ್ದರು