ಪೈಚಾರಿನಲ್ಲಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವ

0


ಪೈಚಾರಿನ ಸ್ವಾಮೀ ಕೊರಗ ತನಿಯ ದೈವರಾಧನಾ ಸಮಿತಿ ಇದರ
ಆಶ್ರಯದಲ್ಲಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವ ಮಾ.9 ರಂದು ನಡೆಯಿತು.


ಸಾಯಂಕಾಲಗುಳಿಗ ದೈವದ ನೇಮ,ಪ್ರಸಾದ ವಿತರಣೆ,ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ,ಬಳಿಕ ದೀಪಾಂಜಲಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.
ರಾತ್ರಿ ಸ್ವಾಮಿ ಕೊರಗತನಿಯ ದೈವದ ನೇಮ
ಮಾ.10ರಂದು ಬೆಳಿಗ್ಗೆ ಸ್ವಾಮಿ ಕೊರಗತನಿಯ ದೈವದ ಪ್ರಸಾದ ವಿತರಣೆ ನಡೆಯಿತು.


ಆಡಳಿತ ಮೊಕ್ತೇಸರರಾದ ನಿಶಾಂತ್ ಕುಮಾರ್ ಪೈಚಾರ್, ಅಧ್ಯಕ್ಷರಾದ ವಿ.ಸಂಜಯಕುಮಾರ್ ಮತ್ತು ಪದಾಧಿಕಾರಿಗಳು ಮತ್ತು ಸದಸ್ಯರು, ನೇಮೋತ್ಸವ ಸಮಿತಿಯ ಸಂಚಾಲಕರಾದ ಬಾಲಕೃಷ್ಣ ರೈ ಪಿಲಿಕೋಡಿ, ಅಧ್ಯಕ್ಷರಾದ ವರಚಂದ್ರ ಪಿ.ಪಿಲಿಕೋಡಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು, ಊರ- ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.