ಪೈಲಾರು ಮಿತ್ರ ವೃಂದದ ವತಿಯಿಂದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ-2024

0

ಮಿತ್ರವೃಂದ ಪೈಲಾರು ಇದರ ವತಿಯಿಂದ 7 ಜನರ 30 ಗಜಗಳ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಿತ್ರ ಟ್ರೋಫಿ-2024
ಮಾ.8 ರಂದು ಪೈಲಾರು ಶಾಲಾ ಮೈದಾನದಲ್ಲಿ ವಠಾರದಲ್ಲಿ ನಡೆಯಿತು.
ಮಿತ್ರ ವೃಂದದ ಮಾಜಿ ಅಧ್ಯಕ್ಷ ಪ್ರಸಾದ ಕೆರೆಮೂಲೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಥಾಪಕಾಧ್ಯಕ್ಷ ಕೃಷ್ಣಪ್ಪ ಕೋಡ್ತುಗುಳಿ ಅಧ್ಯಕ್ಷತೆ ವಹಿಸಿದ್ದರು.
ವಿಜಯ್ ಕೋಡ್ತಿಲ್, ಕೆ ಎಫ್. ಡಿ .ಸಿ ಗೋಂಟಡ್ಕ, ಸದಾಶಿವ ಗೌಡ ಮೂಕಮಲೆ, ಅರುಣ್ ಕುಮಾರ್ ನಾಯರ್ ಕಲ್ಲು, ಸುಪ್ರೀತ್ ಮೋಂಟಡ್ಕ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಶಿಕಾಂತ್ ಮಿತ್ತೂರು ಸ್ವಾಗತಿಸಿದರು. ಧನ್ಯರಾಜ್ ಮೂಕಮಲೆ ವಂದಿಸಿದರು.

ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ 32 ತಂಡಗಳು ಭಾಗವಹಿಸಿತ್ತು. ಮಹಿಳಾ ದಿನಾಚರಣೆಯ ಪ್ರಯುಕ್ತ ಆಹ್ವಾನಿತ ತಂಡಗಳ ಮಹಿಳೆಯರ ಕ್ರಿಕೆಟ್ ಪಂದ್ಯಾಟ ನಡೆಯಿತು.

ಸಮಾರೋಪ ಸಮಾರಂಭ:
ಅಧ್ಯಕ್ಷ ಶಶಿಕಾಂತ್ ಮಿತ್ತೂರು ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಮುರಳೀಧರ ಕೋಡ್ತುಗುಳಿ ಬಹುಮಾನ ವಿತರಿಸಿದರು.
ಅತಿಥಿಗಳಾಗಿ ಪಂಚಾಯತ್ ಸದಸ್ಯೆ ಶ್ರೀಮತಿ ದಿವ್ಯಾ ಮಡಪ್ಪಾಡಿ,
ಶ್ರೀಮತಿ ದೇವಕಿ ಪೈಲಾರು,
ಶ್ರೀಮತಿ ರಾಜೀವಿ ಗೋಳ್ಯಾಡಿ, ಶ್ರೀಮತಿ ಪಾರ್ವತಿ ಸುಬ್ಬಯ್ಯ ಬಾಜಿನಡ್ಕ ಉಪಸ್ಥಿತರಿದ್ದರು.
ಹಿತೇಶ್ ಮೂಕಮಲೆ ಸ್ವಾಗತಿಸಿದರು. ವಿವೇಕ್ ಪಡ್ಪು ವಂದಿಸಿದರು.


ತೀರ್ಥೇಶ್ ಯಾದವ್ ನಾರ್ಣಕಜೆ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ಪಡೆದ ತಂಡಗಳು:
ಪುರುಷರ ವಿಭಾಗದಲ್ಲಿ ಪ್ರಥಮ ಆರ್.ಬಿ ಬ್ರರ್ದಸ್ ಪೆರಾಜೆ, ದ್ವಿತೀಯ ನ್ಯೂ ಬ್ರರ್ದಸ್ ಪಾಲ್ತಾಡ್, ತೃತೀಯ ಯಶಸ್ವಿ ಫ್ರೆಂಡ್ಸ್ ಕುಕ್ಕುಜಡ್ಕ, ಚತುರ್ಥ ಎಂ.ವೈ.ಎಸ್ ಪೈಲಾರು ಪಡೆದುಕೊಂಡಿದೆ. ಮಹಿಳೆಯರ ವಿಭಾಗದಲ್ಲಿ ಪ್ರಥಮ ನಾಗಶ್ರೀ ಪೈಲಾರು, ದ್ವಿತೀಯ ಶೌರ್ಯ ಯುವತಿ ಮಂಡಲ ಪೈಲಾರು ಬಹುಮಾನ ಪಡೆದುಕೊಂಡಿತು.