p>

ನಗರದಲ್ಲಿ ಹೊಸ ನೀರಿನ ಪೈಪುಗಳ ಅಳವಡಿಕೆಯಿಂದ ಸಾರ್ವಜನಿಕರಿಗೆ ತೊಂದರೆ

0

ಅಸಮರ್ಪಕ ಪೈಪ್ ಅಳವಡಿಕೆ ಕಾರ್ಯ ನಿಲ್ಲಿಸಲು ನ.ಪಂ. ಮುಂಭಾಗದಲ್ಲಿ ಸದಸ್ಯ ಕೆ. ಎಸ್. ಉಮ್ಮರ್‌ರಿಂದ ಧರಣಿ ಸತ್ಯಾಗ್ರಹ

ಸುಳ್ಯ ನಗರದಲ್ಲಿ ಆರಂಭಗೊಂಡಿರುವ ಕುಡಿಯುವ ನೀರಿನ ೫೮ ಕೋಟಿ ರೂ ಗಳ ಬೃಹತ್ ಯೋಜನೆಯ ಪೈಪುಗಳನ್ನು ಅಳವಡಿಸುವ ಕಾಮಗಾರಿಯಿಂದ ಸುಳ್ಯದ ನಾನಾ ಕಡೆಗಳಲ್ಲಿ ನೀರಿಗಾಗಿ ಸಮಸ್ಯೆ ಎದುರಾಗಿದೆ. ಕೂಡಲೆ ಈ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಸುಳ್ಯ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್ ರವರು ನಗರ ಪಂಚಾಯತ್ ಆವರಣದಲ್ಲಿ ಇಂದು ಬೆಳಿಗ್ಗೆಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದ ಪತ್ರಿಕೆಗಳಲ್ಲಿ ಮತ್ತು ವರದಿಗಳಲ್ಲಿ ನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯ ಬಗ್ಗೆ ಬಂದಿರುವ ವರದಿಯ ತುಣುಕನ್ನು ಮುದ್ರಿಸಿ ಅದನ್ನು ನೇತಾಡಿಸುವ ಮೂಲಕ ಉಂಟಾಗಿರುವ ಸಮಸ್ಯೆ ಬಗ್ಗೆ ಜನತೆಗೆ ತಿಳಿಸಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಸುಳ್ಯ ನಗರದಲ್ಲಿ ಆರಂಭಗೊಂಡಿರುವ ೫೩ ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆ ಉತ್ತಮವಾಗಿಯೇ ಇದೆ. ಆದರೆ ಇದರ ಕಾಮಗಾರಿಯಲ್ಲಿ ಅವೈಜ್ಞಾನಿಕ ಸ್ಥಿತಿ ಏರ್ಪಟ್ಟಿದ್ದು ಇದರಿಂದ ಇಂದು ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ನೂತನ ಪೈಪುಗಳ ಅಳವಡಿಕೆಯಿಂದಾಗಿ ಅಲ್ಲಲ್ಲಿ ಹಳೆಯ ಪೈಪುಗಳು ಒಡೆದು ನೀರಿಗೆ ಸಮಸ್ಯೆ ಉಂಟಾದರೆ ಕೆಲವು ಕಡೆಗಳಲ್ಲಿ ಮಣ್ಣು ಮಿಶ್ರಿತ ನೀರು ನಲ್ಲಿಗಳಲ್ಲಿ ಬಂದು ಸುಳ್ಯದ ಜನತೆ ಸಂಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಈ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕುಳಿತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.