ಐವರ್ನಾಡು : ಮನೆಯಿಂದ ಅಡಿಕೆ ಕಳ್ಳತನ – ಪೊಲೀಸ್ ದೂರು

0

ಐವರ್ನಾಡಿನಲ್ಲಿ ಮನೆಯಿಂದ ಅಡಿಕೆ ಕಳ್ಳತನ ಮಾಡಿದ ಘಟನೆ ಮಾ.14 ರಂದು ರಾತ್ರಿ ನಡೆದಿದೆ.
ಐವರ್ನಾಡನ ಕುಳ್ಳಂಪಾಡಿ ಹಿರಿಯಣ್ಣ ಎಂಬವರ ಮನೆಯಲ್ಲಿ ಸುಲಿದಿಟ್ಟ ಸುಮಾರು 2.5 ಕ್ವಿಂಟಾಲ್ ಅಡಿಕೆಯನ್ನು ಕಳ್ಳರು ಕದ್ದಿರುವುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ಪ್ರಾರಂಭಿಸಿದ್ದಾರೆ.
ಮನೆಯವರು ರಾತ್ರಿ ತನ್ನ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಿ ವಾಪಾಸು ರಾತ್ರಿ 12.00 ಗಂಟೆಗೆ ಮನೆಗೆ ಬಂದಾಗ ಅಡಿಕೆ ಕಳವುಗೈದಿರುವುದು ತಿಳಿದು ಬಂದಿದೆ.
ಮನೆಯಿಂದ ಹೋಗುವಾಗ ಮನೆಯ ಎದುರಿನ ರಸ್ತೆಯ ಗೇಟಿಗೆ ಬೀಗ ಹಾಕಿ ಹೋಗಿದ್ದರು.
ಕಳ್ಳರು ಗೇಟಿನವರೆಗೆ ವಾಹನವನ್ನು ತಂದು ಅಡಿಕೆಯನ್ನು ಮನೆಯಿಂದ ಹೊತ್ತು ತಂದು ಗಾಡಿಗೆ ಲೋಡು ಮಾಡಿ ಕೊಂಡೋಗಿರಬೇಕೆಂದು ಶಂಕಿಸಲಾಗಿದೆ.