ಅರಂತೋಡು: ಕೊಡೆಂಕಿರಿ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

0

ಅರಂತೋಡು ಗ್ರಾಮದ ಕೊಡೆಂಕಿರಿ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಸಂಕ್ರಮಣದ ಪ್ರಯುಕ್ತ ಸ್ವಾಮಿ ಕೊರಗಜ್ಜ ದೈವದ ಅಗೆಲುಸೇವೆಯು ಮಾ.14ರಂದು ನಡೆಯಿತು.

ಸಂಜೆ ದೀಪಾರಾಧನೆ , ಭಕ್ತಾದಿಗಳಿಂದ ಸ್ವಾಮಿ ಕೊರಗಜ್ಜ ದೈವಕ್ಕೆ ಅಗೇಲುಸೇವೆ , ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಸ್ವಾಮಿ ಕೊರಗಜ್ಜ ದೈವದ ಪ್ರಸಾದ ಸ್ವೀಕರಿಸಿದರು. ಅಗೇಲು ಸೇವೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನ ಮುಖ್ಯಸ್ಥ ಗಿರಿಧರ ಮತ್ತು ಮನೆಯವರು, ಕುಟುಂಬಸ್ಥರು ಹಾಗೂ ಹಲವಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.