ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಪ್ರದರ್ಶನ ತರಗತಿ

0

ಮಗುವಿಗೆ ಗುರುತಿಸಿ ಕಲಿಯಲು ಸಹಕಾರಿಯಾಗುವ ಮೊಂಟೆಸ್ಸರಿ ವಿಧಾನದಲ್ಲಿ ಶಿಕ್ಷಕಿಯರನ್ನು ರೂಪಿಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ ಪ್ರದರ್ಶನ ತರಗತಿ ನಡೆಯಿತು.

ಪ್ರದರ್ಶನ ತರಗತಿಯಲ್ಲಿ ವಿದ್ಯಾರ್ಥಿ ಶಿಕ್ಷಕಿಯರುಗಳೇ ರಚಿಸಿದ ವಿವಿಧ ರೀತಿಯ ಅಧ್ಯಯನ ಮಾದರಿಗಳು ಗಮನಸೆಳೆಯಿತು. ಭಾರತ್ ಸೇವಕ್ ಸಮಾಜದ ಜಿಲ್ಲಾ ಸಂಯೋಜಕ ರಘುಕುಮಾರ್ ಪ್ರದರ್ಶನ ತರಗತಿ ಉದ್ಘಾಟಿಸಿದರು. ಮೌಲ್ಯಮಾಪಕರಾಗಿ ಕಾಸರಗೋಡಿನ ಶಿಕ್ಷಕ ಈಶ್ವರ ನಾಯ್ಕ, ಉಪ್ಪಳದ ನ್ಯೂ ಭಾರತ್ ಕಾಲೇಜಿನ ಸಂಜೀವ ಸಹಕರಿಸಿದರು.

ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಕೌಶಲ್ಯ ತರಬೇತಿಗಳನ್ನು ನಡೆಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ಶಿಕ್ಷಕಿಯರು ಪ್ರತಿ ವರ್ಷ ವಿಭಿನ್ನ ರೀತಿಯ ಕಲಿಕಾ ಮಾದರಿಗಳನ್ನು ಪ್ರದರ್ಶನ ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ.