ಸುಳ್ಯದಲ್ಲಿ ಫ್ರೆಂಡ್ಲಿ ಪಾ ಪೆಟ್ ಶಾಪ್ ಮತ್ತು ಪೆಟ್ ಕ್ಲಿನಿಕ್ ಶುಭಾರಂಭ

0

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಜೇನು ಸೊಸೈಟಿ ಬಿಲ್ಡಿಂಗ್ ನಲ್ಲಿ ಫ್ರೆಂಡ್ಲಿ ಪಾ ಪೆಟ್ ಶಾಪ್ ಮತ್ತು ಪೆಟ್ ಕ್ಲಿನಿಕ್ ಶುಭಾರಂಭಗೊಂಡಿದೆ.

ಹಿರಿಯರಾದ ವೆಂಕಟೇಶ ಪ್ರಭುಗಳು ನೂತನ ಸಂಸ್ಥೆಯಲ್ಲಿ ದೀಪ ಬೆಳಗಿ ಉದ್ಘಾಟಿಸಿದರು. ಹಿರಿಯರಾದ ಚಂದ್ರಕಾಂತ ಪ್ರಭು, ಸುಳ್ಯ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ನಡುಮನೆ, ಶ್ರೀಮತಿ ಲೀಲಾವತಿ ಸೋಣಂಗೇರಿ, ಸುಳ್ಯ ತಾಲೂಕು ಪಶುಸಂಗೋಪನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಪಾಲುದಾರರಾದ ಶ್ರೀಮತಿ ಕಲ್ಪಶ್ರೀ ಧನ್ಯರಾಜ್, ಶ್ರೀಮತಿ ನಿರ್ಮಲ ಪ್ರಭು ಅತಿಥಿಗಳನ್ನು ಬರಮಾಡಿಕೊಂಡರು.

ನೂತನ ಸಂಸ್ಥೆಯಲ್ಲಿ ನಾಯಿ ಮತ್ತು ಇತರ ಸಾಕು ಪ್ರಾಣಿಗಳ ಚಿಕಿತ್ಸೆಗೆ ಸಂಬಂಧಪಟ್ಟಂತೆ ಸಲಹೆ, ಸಾಮಾನ್ಯ ಚಿಕಿತ್ಸೆ, ಲಸಿಕೆ, ದಿ ವಾರ್ಮಿಂಗ್, ಬ್ರೀಡಿಂಗ್ ಮ್ಯಾನೇಜ್ಮೆಂಟ್, ಸರ್ಜರಿ , ಗ್ರೋಮಿಂಗ್, ಪ್ರೀಮಿಯಂ ಕ್ಯಾಟ್ ಕೆಜಸ್ ಸೇರಿದಂತೆ ಅನೇಕ ಚಿಕಿತ್ಸೆಗಳು ಲಭ್ಯವಿದೆ. ಸಂಜೆ ೫.೩೦ ರಿಂದ ೭.೩೦ರವರೆಗೆ ವೈದ್ಯಕೀಯ ಸಲಹೆಯೂ ಲಭ್ಯವಿರುತ್ತದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.