ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಿರಿಯ ಬಿಜೆಪಿ ಮುಖಂಡ ಉಪೇಂದ್ರ ಕಾಮತ್ ಮನೆಗೆ ಭೇಟಿ

0

ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹಿರಿಯ ಬಿಜೆಪಿ ಮುಖಂಡ ಜಾಲ್ಸೂರು ಗ್ರಾಮದ ವಿನೋಬನಗರದ ಉಪೇಂದ್ರ ಕಾಮತ್ ಅವರ ಮನೆಗೆ ಮಾ.20ರಂದು ರಾತ್ರಿ ಭೇಟಿ ನೀಡಿ, ಆಶೀರ್ವಾದ ಪಡೆದರು.

ಉಪೇಂದ್ರ ಕಾಮತ್ ಅವರು ಬ್ರಿಜೇಶ್ ಚೌಟರನ್ನು ಶಾಲು ಹಾಕಿ ಸ್ವಾಗತಿಸಿ, ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಉಪೇಂದ್ರ ಕಾಮತ್ ಅವರ ಪತ್ನಿ ಶ್ರೀಮತಿ ಪದ್ಮಾವತಿ ಕಾಮತ್, ಸುಧಾಕರ ಕಾಮತ್ ವಿನೋಬನಗರ, ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಹರೀಶ್ ಕಂಜಿಪಿಲಿ ಸೇರಿದಂತೆ ಬಿಜೆಪಿ ಮುಖಂಡರು, ಜಾಲ್ಸೂರು, ಕನಕಮಜಲು , ಬೆಳ್ಳಾರೆ, ಐವರ್ನಾಡು, ಮಂಡೆಕೋಲು, ಅಜ್ಜಾವರ , ಸುಳ್ಯದ ಹಲವಾರು ಮಂದಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.