ಕೋವಿ ಡೆಪಾಸಿಟ್ ಮಾಡುವುದಕ್ಕೆ ರೈತರ ತೀವ್ರ ವಿರೋಧ

0


ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲು ತಾಲೂಕು ಕಚೇರಿಗೆ ಹೊರಟ ರೈತರು


ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲಿ ಕೋವಿ ಪರವಾನಿಗೆದಾರರು ತಮ್ಮ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ಅಥವಾ ಹತ್ತಿರದ ಮದ್ದು ಗುಂಡು ವ್ಯಾಪಾರಿಗಳಲ್ಲಿ ಡೆಪಾಸಿಟ್ ಮಾಡಬೇಕೆಂಬ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರೈತರು ತೀವ್ರ ಅಸಮಾಧಾನ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.


ಇಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಸೇರಿದ ಸುಮಾರು ನೂರಕ್ಕೂ ಅಧಿಕ ರೈತರು ಈ ಬಗ್ಗೆ ಸುದೀರ್ಘ ಚರ್ಚೆ ನೆಡಸಿದರು. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಕೋವಿ ಡೆಪಾಸಿಟ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿ ಪೊಲೀಸ್ ಇಲಾಖೆ ಒತ್ತಡ ಹೇರುವುದರಿಂದ ಒಂದೆರಡು ತಿಂಗಳುಗಳ ಕಾಲ ರೈತರು ತಮ್ಮ ಕೋವಿಗಳನ್ನು ಡೆಪಾಸಿಟ್ ಮಾಡಬೇಕಾದ ಪರಿಸ್ಥಿತಿ ಬರುತ್ತಿದ್ದು, ಇದರಿಂದ ಕಾಡುಪ್ರಾಣಿಗಳ ಹಾವಳಿ ಉಂಟಾಗಿ ರೈತರಿಗೆ ತೀವ್ರ ನಷ್ಟ ಉಂಟಾಗುತ್ತಿದೆ ಎಂದು ಅಭಿಪ್ರಾಯಪಟ್ಟ ರೈತರು ಈ ಕ್ರಮವನ್ನು ಬದಲಾಯಿಸಿ ಕ್ರಿಮಿನಲ್ ಹಿನ್ನಲೆಯುಳ್ಳವರಿಂದ ಮಾತ್ರ ಕೋವಿ ಡೆಪಾಸಿಟ್ ಪಡೆದು ಇತರ ರೈತರ ಬೆಳೆ ರಕ್ಷಣೆಗೆ ಅಡ್ಡಿ ಪಡಿಸಬಾರದು ಎಂದು ಚುನಾವಣಾಧಿಕಾರಿಗಳನ್ನು ಕೇಳಿಕೊಳ್ಳಲು ನಿರ್ಧರಿಸಿದರು. ಅಲ್ಲದೆ ಸುಳ್ಯ ತಾಲೂಕು ಕಚೇರಿಯಲ್ಲಿರುವ ಸಹಾಯಕ ಚುನಾವಣಾಧಿಕಾರಿಯವರಿಗೆ ಮನವಿ ಸಲ್ಲಿಸಲು ರೈತರು ಶಿವಕೃಪಾಕಲಾ ಮಂದಿರದಿಂದ ತಾಲೂಕು ಕಚೇರಿ ಕಡೆ ಹೊರಟಿದ್ದಾರೆ.