ಲೋಕಸಭಾ ಚುನಾವಣೆ ಹಿನ್ನೆಲೆ: ಸುಳ್ಯದಲ್ಲಿ ಪೊಲೀಸ್ ಪಥ ಸಂಚಲನ

0

ಲೋಕಸಭಾ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ಇಂದು ಸುಳ್ಯದಲ್ಲಿ ಪೊಲೀಸರು ಹಾಗೂ ಸಿ ಆರ್ ಪಿ ಎಫ್ ಪಡೆ ವತಿಯಿಂದ ಪಥ ಸಂಚಲನ ನಡೆಯಿತು.

ಸುಳ್ಯ ಜ್ಯೋತಿ ವೃತ್ತದಿಂದ ಆರಂಭಗೊಂಡು ಗಾಂಧಿನಗರ ಪೆಟ್ರೋಲ್ ಬಂಕ್ ನವರೆಗೆ ಸಾಗಿ ಸುಳ್ಯ ಪೊಲೀಸ್ ಠಾಣಾ ವಠಾರದಲ್ಲಿ ಸಮಾಪನ ಗೊಂಡಿತು.

ಸಿ ಆರ್ ಪಿ ಎಫ್ ಪೂಣೆ ವಿಭಾಗದ 32ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು, ಸುಳ್ಯ ಪೊಲೀಸ್ ಠಾಣೆಯ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು,ಅಧಿಕಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಸಿ ಆರ್ ಪಿ ಎಫ್ ಇನ್ಸ್ಪೆಕ್ಟರ್ ಎ ಕೆ ತಿವಾರಿ,ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತ್ಯನಾರಾಯಣ,ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು, ತನಿಖಾ ವಿಭಾಗದ ಎಸ್ ಐ ಸರಸ್ವತಿ, ಎ ಎಸ್ ಐ ಉದಯಕುಮಾರ್ ಭಟ್ ಉಪಸ್ಥಿತರಿದ್ದರು.

ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು,ಭದ್ರತೆ,ಗಡಿಗಳಲ್ಲಿ ತಪಾಸಣೆ,ಮತ ಕೇಂದ್ರಗಳಲ್ಲಿ ಭದ್ರತೆ ಮುಂತಾದ ವಿಭಾಗದಲ್ಲಿ ಪೊಲೀಸ್ ಇಲಾಖೆಯು ಕೇಂದ್ರ ಮೀಸಲು ಪಡೆಯ ಸಿಬ್ಬಂದಿಗಳ ಜೊತೆ ಕರ್ತವ್ಯ ನಿರ್ವಹಿಸಲಿದೆ