ಸುಳ್ಯದ ಕಾನತ್ತಿಲ ಕುಟುಂಬದ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಸಪರಿವಾರ ದೈವಗಳ ಪ್ರತಿಷ್ಟಾ ಕಲಶ ಹಾಗೂ ಧರ್ಮನಡಾವಳಿ

0

ಸುಳ್ಯದ ಕಾನತ್ತಿಲ ಕುಟುಂಬದ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಸಪರಿವಾರ ದೈವಗಳ ಪ್ರತಿಷ್ಠಾ ಕಲಶ ಹಾಗೂ ಧರ್ಮನಡಾವಳಿ ಕಾರ್ಯಕ್ರಮ ಮಾ. 24 ರಂದು ಆರಂಭಗೊಂಡಿತು.
ಮಾ.24 ರಂದು ಸಂಜೆ ತಂತ್ರಿಗಳ ಆಗಮನದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.

ಮಾ.25 ರಂದು ಬೆಳಿಗ್ಗೆ ಮಹಾ ಗಣಪತಿ ಹೋಮ, ಕಲಶ ಪೂಜೆ, ಬಳಿಕ ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಬಿಂಬ ಪ್ರತಿಷ್ಠೆ, ಶಿಖರ ಪ್ರತಿಷ್ಟೆ, ಕಲಶಾಭಿಷೇಕ, ನಾಗದೇವರಿಗೆ ಕಲಶ ತಂಬಿಲ ಸೇವೆ, ಗುಳಿಗ ಮತ್ತು ಚಾಮುಂಡಿಗೆ ತಂಬಿಲ ಸೇವೆ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಮಾ. 28 ರಂದು ಪೂರ್ವಾಹ್ನ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ ಗುರುಕಾರ್ನೂರು, ಸತ್ಯದೇವತೆ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಪಾಷಾಣ ಮೂರ್ತಿ, ಕೊರತ್ತಿ ದೈವಗಳ ನೇಮ ನಡೆಯುವುದು. ಮಾ.29 ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ದೈವದ ನಡಾವಳಿ, ಸಂಜೆ ಗುಳಿಗ ದೈವದ ನೇಮ, ಅಂಗರ ಬಾಕುಡ ದೈವದ ನೇಮ ನಡೆಯಲಿದೆ.